ನವದೆಹಲಿ: ಕೇಂದ್ರದ ಮಾಜಿ ಮಂತ್ರಿ, ಬುಡಕಟ್ಟು ಜನಾಂಗದ ನಾಯಕ ವಿಷ್ಣು ದೇವ್ ಸಾಯಿ (Vishnu Deo Sai) ಛತ್ತೀಸ್‌ಗಢ (Chhattisgarh) ಮುಖ್ಯಮಂತ್ರಿಯಾಗಿ (CM) ಆಯ್ಕೆಯಾಗಿದ್ದಾರೆ.
ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದು ವಾರ ಕಳೆದಿದೆ. ಈ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು ಮುಖ್ಯಮಂತ್ರಿ ಆಯ್ಕೆಯ ಕಸರತ್ತನ್ನು ಹೈಕಮಾಂಡ್ ಆರಂಭಿಸಿದೆ. ಭಾನುವಾರ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
- Advertisement 2-
- Advertisement 3-
ಬಿಷ್ಣು ದೇವ್ ಸಾಯಿ ಯಾರು?:
2023 ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ವಿಷ್ಣು ದೇವ ಸಾಯಿ ಕುಂಕೂರಿಯಿಂದ ಗೆದ್ದಿದ್ದಾರೆ. ಸಾಯಿ ಅವರು 2020 ರಿಂದ 2022 ರವರೆಗೆ ಭಾರತೀಯ ಜನತಾ ಪಕ್ಷದ (BJP) ಛತ್ತೀಸ್‌ಗಢ ರಾಜ್ಯ ಅಧ್ಯಕ್ಷರಾಗಿದ್ದರು. ಅವರು ಮೊದಲ ನರೇಂದ್ರ ಮೋದಿ ಕ್ಯಾಬಿನೆಟ್‌ನಲ್ಲಿ ಉಕ್ಕು, ಗಣಿ, ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ (MoS) ಸಚಿವರಾಗಿದ್ದರು. ವಿಷ್ಣು ದೇವು 1999, 2004, 2009 ಮತ್ತು 2014 ರಲ್ಲಿ ರಾಯಗಢ ಕ್ಷೇತ್ರದಿಂದ ಸತತ 4 ಲೋಕಸಭಾ ಚುನಾವಣೆಗಳನ್ನು ಗೆದ್ದರು. ಈ ಚುನಾವಣೆಯಲ್ಲಿ ಸಾಯಿ ಅವರು ಕಾಂಗ್ರೆಸ್ ಅಭ್ಯರ್ಥಿಗಳಾದ ಪುಷ್ಪಾ ದೇವಿ ಸಿಂಗ್, ರಾಮ್ಪುಕರ್ ಸಿಂಗ್, ಹೃದಯರಾಮ್ ರಾಥಿಯಾ ಮತ್ತು ಆರ್ತಿ ಸಿಂಗ್ ಅವರನ್ನು ಸೋಲಿಸಿದರು. ಇದನ್ನೂ ಓದಿ: ಮದ್ಯಸೇವಿಸಿ ಕಾರ್ಯಕ್ರಮಕ್ಕೆ ಹೋಗ್ತಾರೆ, ನಮ್ಮನ್ನು ನಿರ್ಲಕ್ಷಿಸಿದ್ದಾರೆ – ಪಂಜಾಬ್ ಸಿಎಂ ವಿರುದ್ಧ ಪುತ್ರಿ ಕೆಂಡ
- Advertisement 4-
ಸಾಯಿ 1990 ಮತ್ತು 1993 ರಲ್ಲಿ ಅವಿಭಜಿತ ಮಧ್ಯಪ್ರದೇಶದ ತಪ್ಕರಾ ಕ್ಷೇತ್ರದಿಂದ ಸತತ ಎರಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. 2023ರ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ವಿಷ್ಣು ದೇವು ಈ ಬಾರಿ ಕಾಂಗ್ರೆಸ್‌ನ ಹಾಲಿ ಶಾಸಕ ಯುಡಿ ಮಿಂಜ್ ಅವರನ್ನು ಸೋಲಿಸಿದ್ದಾರೆ. ಇದನ್ನೂ ಓದಿ: ಸಿಎಂ ಜೊತೆ ಹರಿಪ್ರಸಾದ್ ಜಟಾಪಟಿ – ಮಧು ಬಂಗಾರಪ್ಪ ಜೊತೆ ಮುಸುಕಿನ ಗುದ್ದಾಟ!