ಫ್ಯಾಷನ್ ಪ್ರಿಯರ ಮನಗೆದ್ದ ವೆಡ್ಡಿಂಗ್ ಜ್ಯುವೆಲ್ ಬ್ಲೌಸ್‌ಗಳು

Public TV
1 Min Read
blouse 3

ವೆಡ್ಡಿಂಗ್ ಫ್ಯಾಷನ್‌ನಲ್ಲಿ  (Wedding Fashion) ನಾನಾ ಬಗೆಯ ಜ್ಯುವೆಲ್ ಸೀರೆ ಬ್ಲೌಸ್‌ಗಳು ಫ್ಯಾಷನ್ ಲೋಕದಲ್ಲಿ ಎಂಟ್ರಿ ನೀಡಿದ್ದು, ಅವುಗಳಲ್ಲಿ 3 ಬಗೆಯವು ಅತಿ ಹೆಚ್ಚು ಚಾಲ್ತಿಯಲ್ಲಿವೆ. ಜ್ಯುವೆಲ್ ಬ್ಲೌಸ್‌ಗಳು ಗ್ರ‍್ಯಾಂಡ್ ಹಾಗೂ ಶ್ರೀಮಂತರ ಮನೆಯ ಮದುವೆಗಳಲ್ಲಿ ಮಾತ್ರ ಕಾಣಬಹುದಾಗಿದೆ. ಮದುವೆಯಾಗುವ ಮದುಮಗಳ ಹಾಗೂ ಮನೆಯವರ ಸೀರೆಯೊಂದಿಗೆ ಕಾಣಸಿಗುತ್ತಿದ್ದವು. ಇದೀಗ ಈ ಬ್ಲೌಸ್‌ಗಳ ಡಿಸೈನ್ ಸಾಮಾನ್ಯವಾಗತೊಡಗಿದೆ. ರೆಡಿಮೇಡ್‌ನಲ್ಲೂ ಇವು ಕಾಣಸಿಗುತ್ತಿವೆ. ಅಲ್ಲದೇ, ಇಮಿಟೇಷನ್ ರೆಡಿ ಜ್ಯುವೆಲ್ ಡಿಸೈನ್ ಸಾಮಗ್ರಿಗಳು ಈ ಬ್ಲೌಸ್‌ನ ಸಿಂಗಾರ ಮಾಡತೊಡಗಿವೆ. ಪರಿಣಾಮ, ಸಾಮಾನ್ಯ ಮಹಿಳೆಯರು ಹಾಗೂ ಹುಡುಗಿಯರು ಕೂಡ ಈ ಬ್ಲೌಸ್‌ಗಳನ್ನು ಡಿಸೈನ್ ಮಾಡಿಸುವ ಟ್ರೆಂಡ್ ಶುರುವಾಗಿದೆ.

blouse

ಮದುವೆ ಹುಡುಗಿಯ ಸೌಂದರ್ಯವನ್ನು ಹೆಚ್ಚಿಸುವ ರೇಷ್ಮೆ ಸೀರೆಗಳ ಬ್ಲೌಸ್‌ಗಳು ಇಂದು ಗೋಲ್ಡನ್ ಲುಕ್ ಪಡೆಯುತ್ತಿವೆ. ಹ್ಯಾಂಡ್ ಎಂಬ್ರಾಯ್ಡರಿ ಜೊತೆಗೆ ಗೋಲ್ಡ್ ಟಚ್ ನೀಡಲು ಸಾಕಷ್ಟು ಗೋಲ್ಡ್ ಕೋಟೆಡ್ ಹಾಗೂ ಸಿಲ್ವರ್‌ನ ಬಂಗಾರದ ಲೇಪನವುಳ್ಳ ಚೈನ್ ಹಾಗೂ ಹರಳಿನ ಓಲೆಯಂತಹ ಸಿಂಗಾರದ ಆಭರಣಗಳಿಂದಲೂ ಹೊಲಿದು ಡಿಸೈನ್ ಮಾಡಿ ಸಿಂಗರಿಸಲಾಗುತ್ತಿದೆ.

blouse 1

ಸಿನಿಮಾ ತಾರೆಯರ (Film Actors) ಜ್ಯುವೆಲ್ ಬ್ಲೌಸ್‌ನಲ್ಲಿ ಬಾಜುಬಂದ್ ಬದಲು ಲಕ್ಷ್ಮಿ ಪೆಂಡೆಂಟ್‌ಅನ್ನು ಬಳಸಲಾಗುತ್ತಿದೆ. ನಾಗರ, ಗಣಪತಿ ಹೀಗೆ ನಾನಾ ಬಗೆಯ ಹೆಚ್ಚು ಚಾಲ್ತಿಯಲ್ಲಿರುವ ಪೆಂಡೆಂಟ್ ಶೈಲಿಯವನ್ನು ಬ್ಲೌಸ್‌ನ ಸ್ಲಿವ್ ಭಾಗದಲ್ಲಿ ಅಂದರೆ, ಬಾಜುಬಂದ್ ಕಟ್ಟುವ ಜಾಗದಲ್ಲಿ ಹೊಲಿದು ಇಲ್ಲವೇ ವಿನ್ಯಾಸಗೊಳಿಸಿ ಶೃಂಗರಿಸಲಾಗುತ್ತಿದೆ. ಈ ಡಿಸೈನ್ ದುಬಾರಿಯಾದರೂ ಕೆಲವು ಹೆಣ್ಣುಮಕ್ಕಳು ರಾಯಲ್ ಲುಕ್‌ಗಾಗಿ ಧರಿಸುತ್ತಿದ್ದಾರೆ. ಇದನ್ನೂ ಓದಿ:BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

blouse 2

ಚಿಕ್ಕ-ದೊಡ್ಡ ಬಂಗಾರ ವರ್ಣದ ನಾಣ್ಯಗಳನ್ನು ಜ್ಯುವೆಲ್ ಬ್ಲೌಸ್ ಸ್ಲಿವ್ ವಿನ್ಯಾಸಕ್ಕೆ ಬಳಸಲಾಗುತ್ತಿದೆ. ಗೋಲ್ಡ್ ಕೋಟೆಡ್, ಸಿಲ್ವರ್ ಕೋಟೆಡ್ ಕಾಯಿನ್‌ಗಳನ್ನು ಡಿಸೈನ್‌ನಲ್ಲಿ ಬಳಸುತ್ತಿರುವುದನ್ನು ಸೆಲೆಬ್ರೆಟಿಗಳ ವೆಡ್ಡಿಂಗ್ ಬ್ಲೌಸ್‌ಗಳಲ್ಲಿ ಕಾಣಬಹುದು.

ಫ್ಯಾಷನ್ ಪ್ರಿಯರಿಗೆ ಟಿಪ್ಸ್:

ಕಡಿಮೆ ಬಜೆಟ್‌ನಲ್ಲಾದಲ್ಲಿ ಇಮಿಟೇಷನ್ ಜ್ಯುವೆಲ್‌ಗಳಿಂದಲೂ ಬ್ಲೌಸ್ ಡಿಸೈನ್ ಮಾಡಿಸಬಹುದು.
ರೆಡಿಮೇಡ್ ಸೀರೆ ಬ್ಲೌಸ್ ಕೈಗೆಟಕುವ ದರದಲ್ಲಿ ದೊರೆಯುತ್ತದೆ.
ಆದಷ್ಟೂ ಲೈಟ್ವೈಟ್ ಜ್ಯುವೆಲ್ ಬ್ಲೌಸ್ ಆಯ್ಕೆ ಮಾಡಿ.

Share This Article