ಮಾರುಕಟ್ಟೆಗೆ ಬಂತು ಹಾರುವ ಇಯರಿಂಗ್‌ಗಳು

Public TV
2 Min Read
earrings

ದಿನ ಕಳೆದಂತೆ ನಯಾ ಫ್ಯಾಷನ್ ಟ್ರೆಂಡ್‌ಗಳು ಮಾರುಕಟ್ಟೆಗೆ ಬರುತ್ತವೆ. ಕಿವಿಯಲ್ಲಿ ಬಣ್ಣ ಬಣ್ಣದ ರೆಕ್ಕೆ ಪುಕ್ಕ ಹಾರಾಡುತ್ತಿದ್ದರೆ, ಕುತ್ತಿಗೆಯಲ್ಲಿ ಹಕ್ಕಿಯ ಪುಕ್ಕವೊಂದರ ಪೆಂಡೆಂಟ್. ಹ್ಯಾಟ್‌ಗಳ ಮೇಲೆ ಸುಂದರವಾದ ಗರಿಗಳು. ಇದು ಸದ್ಯದ ಲೇಟೆಸ್ಟ್ ಟ್ರೆಂಡ್ ಆಗಿದೆ. ಇದು ಯುವತಿಯರ ಫಂಕಿ ಜ್ಯುವೆಲ್ ಲೋಕದಲ್ಲಿ ಟ್ರೆಂಡಿಯಾಗಿರುವ ಫೆದರ್ ಆ್ಯಕ್ಸೆಸರೀಸ್ (Feather Accessories) ಮಾಯೆ. ಪಕ್ಷಿಗಳ ಉದುರಿದ ರೆಕ್ಕೆ-ಪುಕ್ಕಗಳಿಂದ ತಯಾರಿಸಲಾಗುವ ಈ ಫೆದರ್ ಆ್ಯಕ್ಸೆಸರೀಸ್ ಸದ್ಯ ಫ್ಯಾಷನ್ ಪ್ರೇಮಿಗಳ ಗಮನ ಸೆಳೆದಿದೆ. ಹಾರುವ ಇಯರಿಂಗ್‌ಗಳು ಸಖತ್ ಮೋಡಿ ಮಾಡುತ್ತಿವೆ.

earrings 1

ಮೈನಾ, ಪಾರಿವಾಳ, ಲವ್ ಬರ್ಡ್ಸ್ ಸೇರಿದಂತೆ ನಾನಾ ಪಕ್ಷಿಗಳ ಉದುರಿದ ರೆಕ್ಕೆ-ಪುಕ್ಕಗಳನ್ನು ಸುಂದರವಾಗಿ ಜೋಡಿಸಿ, ಅದಕ್ಕೆ ಒಂದು ಆಕಾರ ನೀಡಿ ಫೆದರ್ ಆ್ಯಕ್ಸೆಸರೀಸ್ ರೂಪಿಸಲಾಗಿರುತ್ತದೆ. ಇಯರಿಂಗ್ಸ್, ನೆಕ್ಪೀಸ್, ಬ್ರೆಸ್ಲೆಟ್, ಪೆಂಡೆಂಟ್, ಹೇರ್ ಆ್ಯಕ್ಸೆಸರೀಸ್ ಹೀಗೆ ನಾನಾ ಬಗೆಯಲ್ಲಿ ಈ ಟ್ರೆಂಡ್ ಚಾಲ್ತಿಯಲ್ಲಿದೆ. ಇದನ್ನೂ ಓದಿ:ಶ್ರೀಲೀಲಾ ಸೊಂಟ ಬಳುಕಿಸಿದ್ದ ಕಿಸ್ಸಿಕ್ ಫುಲ್ ಸಾಂಗ್ ರಿಲೀಸ್

fashion

ಫ್ಯಾಷನ್ ರ‍್ಯಾಪ್ ಏರುವ ಮಾಡೆಲ್‌ಗಳಿಂದಿಡಿದು ಕಾಲೇಜು ಹುಡುಗಿಯರು ಈ ಫೆದರ್ ಆ್ಯಕ್ಸೆಸರೀಸ್ ಕ್ರೇಜ್‌ಗೆ ಮರುಳಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಬಹುತೇಕ ಫ್ಯಾಷನ್ ಶೋಗಳಲ್ಲಿ ಫೆದರ್ ಆಕ್ಸೆಸರೀಸ್ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ಕಿವಿಯೋಲೆ, ಪೆಂಡೆಂಟ್, ಕೈ ಉಂಗುರ, ಕಿರೀಟ, ಹೆಡ್‌ಬ್ಯಾಂಡ್, ಹೇರ್‌ಬ್ಯಾಂಡ್ ಹೀಗೆ ನಾನಾ ಬಗೆಯಲ್ಲಿ ಈ ರೆಕ್ಕೆ-ಪುಕ್ಕಗಳ ಆಭರಣಗಳು ಬಳಕೆಯಾಗುತ್ತಿವೆ. ಇನ್ನು ಕೂದಲನ್ನು ಕಟ್ಟದೇ ಬಿಟ್ಟಾಗ, ಈ ಫೆದರ್ ಇಯರಿಂಗ್‌ಗಳು ಹೇರ್ ಕಲರಿಂಗ್ ಮಾಡಿದಂತೆ ಬಿಂಬಿಸುತ್ತವೆ. ನೋಡಲು ವಿಭಿನ್ನವಾಗಿ ಕಾಣುತ್ತವೆ. ಇವನ್ನು ಧರಿಸಿದಾಗ ಮಾಡರ್ನ್ ಹಾಗೂ ವೆಸ್ಟರ್ನ್ ಲುಕ್ ಕೊಡೋದು ಗ್ಯಾರಂಟಿ.

ಅಂದಹಾಗೆ, ಈ ಡಿಸೈನರಿ ಆ್ಯಕ್ಸೆಸರೀಸ್ ಬೆಲೆ ಕಡಿಮೆಯೇನಿಲ್ಲ. ಮಾಲ್‌ನಲ್ಲಿ 200 ರೂ. ದಾಟಿದರೆ, ಫ್ಯಾನ್ಸಿ ಸ್ಟೋರ್‌ಗಳಲ್ಲಿ ಇವುಗಳ ಗುಣಮಟ್ಟದ ಮೇಲೆ ನಿರ್ಧರಿತವಾಗಿರುತ್ತವೆ. ಕುಶಲಕರ್ಮಿಗಳ ಕೈಗಳಲ್ಲಿ ತಯಾರಾಗಿ ಬರುವ ಇವುಗಳು ನಾನಾ ಬಗೆಯ ಡಿಸೈನ್‌ಗಳಲ್ಲಿ ಲಭ್ಯ. ಆಕಾರಕ್ಕೆ ತಕ್ಕಂತೆ ಬೆಲೆ. ಆದರೆ, ಹೆಡ್‌ಬ್ಯಾಂಡ್ ಹಾಗೂ ಫಿಂಗರ್ ರಿಂಗ್‌ಗಳ ಬೆಲೆ ತುಸು ಹೆಚ್ಚು.

ಫ್ಯಾಷನ್ ಟಿಪ್ಸ್:

ನೀರು ತಾಗಿಸಬಾರದು.
ವೈಬ್ರೆಂಟ್ ಕಲರ್ಸ್ ಉಡುಪುಗಳಿಗೆ ಸಖತ್ ಮ್ಯಾಚ್ ಆಗುತ್ತವೆ.
ಕ್ಯಾಶುವಲ್ಸ್ ಹಾಗೂ ಫಾರ್ಮಲ್ಸ್ ಎರಡಕ್ಕೂ ಧರಿಸಬಹುದು.
ಹೆಲ್ಮೆಟ್ ಹಾಕುವಾಗ ಬಳಸಬೇಡಿ. ಮುರಿದು ಹೋಗುವುದು.
ಕೂದಲು ಬಾಚಿದ ಹಾಗೂ ಮೇಕಪ್ ಮುಗಿದ ನಂತರ ಧರಿಸಬೇಕು.

Share This Article