ನಿಮ್ಮ ಸೌಂದರ್ಯ ಹೆಚ್ಚಿಸಲಿದೆ ಈ ಮಾಡ್ರನ್ ಬ್ಲೌಸ್‌ಗಳು

Public TV
2 Min Read
fashion 1 3

ನಾರಿಯರು ಸೀರೆ ಉಟ್ಟರೆ ಅಂದ. ಹುಡುಗಿಯರು ಸೀರೆಯಲ್ಲಿ (Saree) ಕಾಣುವಷ್ಟು ಸುಂದರವಾಗಿ ಬಹುಶಃ ಯಾವುದೇ ಬಟ್ಟೆಯಲ್ಲಿ ಕಾಣಿಸೋದಿಲ್ಲ ಅನ್ನಿಸುತ್ತೆ. ಮಹಿಳೆಯರು ಸೀರೆ ಉಟ್ಟುಕೊಂಡು ಬಂದರೆ ಮಹಾಲಕ್ಷ್ಮಿಯ ಕಳೆ ಬರುತ್ತೆ. ಅದ್ರಲ್ಲೂ ಈಗಂತೂ ಮಾರುಕಟ್ಟೆಯಲ್ಲಿ ಸಾವಿರಾರು ವೆರೈಟಿಯಲ್ಲಿ ಟ್ರೆಂಡಿ ಕಲೆಕ್ಷನ್‌ಗಳು ಲಗ್ಗೆ ಇಟ್ಟಿದೆ. ಇದೇ ಕಾರಣಕ್ಕೆ ಇತ್ತೀಚಿಗೆ ಎಲ್ಲಾ ವಯೋಮಾನದ ಹೆಂಗಳೆಯರೂ ಸೀರೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನೂ ಓದಿ:ಸಸ್ಟೈನಬಲ್ ಫ್ಯಾಷನ್ ವೀಕ್ – ಫ್ಯಾಷನ್ ಪಾಪ್ ಅಪ್ ಮಾರಾಟ ಮೇಳ

saree

ಬರೀ ಸೀರೆ ಚೆನ್ನಾಗಿದ್ದರೆ ಸಾಲೋದಿಲ್ಲ. ಸೀರೆಗೆ ತಕ್ಕ ಹಾಗೆ ಬ್ಲೌಸ್ (Blouse) ಹೊಲಿಸಿದ್ರೆ ಮಾತ್ರ ಆ ಸೀರೆ ಉಟ್ಟವರಿಗೆ ಒಂದು ಕಳೆ ಬರೋದಕ್ಕೆ ಸಾಧ್ಯ. ಇತ್ತೀಚಿಗೆ ಮಧ್ಯ ವಯಸ್ಕರು ಹಾಗೆ ಅದಕ್ಕಿಂತ ಮೇಲಿನವರು ಟ್ರೆಡಿಷನಲ್ ಸೀರೆಯತ್ತ ಆಕರ್ಷಿತರಾದರೆ, ಇತ್ತ ಯುವತಿಯರು ಮಾಡ್ರನ್ ಸೀರೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅದ್ರಲ್ಲೂ ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿಭಿನ್ನ ಶೈಲಿಯ ಡಿಸೈನರ್ ಬ್ಲೌಸ್‌ಗಳು ಲಗ್ಗೆ ಇಟ್ಟಿದ್ದು, ನಿಮ್ಮ ಸೌಂದರ್ಯವನ್ನು (Beauty) ಮತ್ತಷ್ಟು ಹೆಚ್ಚಿಸುವಂತಿದೆ. ಅಷ್ಟಕ್ಕೂ ನಿಮ್ಮ ಸೀರೆಗೆ ಒಪ್ಪುವಂತಹ ಡಿಸೈನರ್ ಬ್ಲೌಸ್ ಕಲೆಕ್ಷನ್ ಹೇಗಿದೆ ಅಂತ ನೋಡೋಣ.

fashion 1 1

ಫುಲ್ ಸ್ಲೀವ್ ಕಪ್ಪು ಬಣ್ಣದ ಬ್ಲೌಸ್
ಕಪ್ಪು ಬಣ್ಣದ ಬ್ಲೌಸ್ ಸಾಮಾನ್ಯವಾಗಿ ಎಲ್ಲರ ಬಳಿ ಇದ್ದರೆ ಒಳ್ಳೆಯದು. ಯಾಕಂದ್ರೆ ಹೆಚ್ಚು ಕಡಿಮೆ ಎಲ್ಲಾ ಬಣ್ಣದ ಸೀರೆಯ ಜೊತೆಗೆ ಈ ಬ್ಲೌಸ್ ಮ್ಯಾಚ್ ಆಗುತ್ತೆ. ಕಪ್ಪು ಬಣ್ಣದ ಬ್ಲೌಸ್ ಅನ್ನು ಉದ್ದ ಕೈ ಇರುವಂತೆ ಹೊಲಿಸಿ. ಹಿಂದುಗಡೆ ಈ ರೀತಿ ಸ್ಟೈಲ್ ಆಗಿ ಹೊಲಿಸಿದರೆ ತುಂಬಾನೇ ಚೆನ್ನಾಗಿ ಕಾಣುತ್ತೆ.

ಫ್ಲವರ್ ಹ್ಯಾಂಡ್ ಬ್ಲೌಸ್
ಸೀರೆಯ ಬ್ಲೌಸ್‌ಗೆ ಫ್ಲವರ್ ಹಾಂಡ್ ಡಿಸೈನ್ ಇದ್ದರೆ ತುಂಬಾನೇ ಚೆನ್ನಾಗಿ ಕಾಣುತ್ತೆ. ಈ ಡಿಸೈನ್ ಸೀರೆ ಟ್ರೆಂಡಿ ಹಾಗೂ ಕ್ಲಾಸಿ ಲುಕ್ ಕೊಡುತ್ತೆ.

fashion 2

ಬ್ಲೌಸ್ ವಿತ್ ಬೆಲ್ಟ್
ಬ್ಲೌಸ್ ವಿತ್ ಬೆಲ್ಟ್ ಇರುವ ಸೀರೆ ಉಟ್ಟರೆ ಲುಕ್ ತುಂಬಾನೇ ಚೆನ್ನಾಗಿರುತ್ತೆ. ಇಲ್ಲಿ ಸೀರೆಗಿಂತ ಬ್ಲೌಸ್ ತುಂಬಾನೇ ಅಟ್ರ‍್ಯಾಕ್ಟಿವ್ ಆಗಿದೆ. ಲಾಂಗ್ ಫ್ಲವರ್ ಹ್ಯಾಂಡ್ ಬ್ಲೌಸ್ ಜೊತೆಗೆ ಬೆಲ್ಟ್ ಕೂಡ ಇದ್ದು, ತುಂಬಾನೇ ಸುಂದರವಾಗಿದೆ.

fashion 1 2

ಟ್ರೈ ಆ್ಯಂಗಲ್ ಬಾಕ್ ಡಿಸೈನ್
ನಿಮ್ಮಲ್ಲಿ ಫ್ಯಾನ್ಸಿ ಸೀರೆ ಇದ್ದರೆ ನೀವು ಈ ರೀತಿ ಬ್ಲೌಸ್ ಹೊಲಿಸಿಕೊಳ್ಳಬಹುದು. ಬ್ಲೌಸ್ ಹಿಂದುಗಡೆ ಟ್ರೈ ಆ್ಯಂಗಲ್ ಶೇಪ್ ಕೊಟ್ಟು, ರವಿಕೆಯನ್ನು ಈ ರೀತಿ ಡಿಸೈನ್ ಮಾಡಿಕೊಳ್ಳಿ.

ಶರ್ಟ್ ಕಾಲರ್ ಬ್ಲೌಸ್ ಇತ್ತೀಚಿಗೆ ಶರ್ಟ್ ಕಾಲರ್ ಬ್ಲೌಸ್ ತುಂಬಾನೇ ಫೇಮಸ್ ಆಗ್ತಿದೆ. ಹಿಂದಿನ ಕಾಲದಲ್ಲಿ ಈ ರೀತಿ ಬ್ಲೌಸ್‌ಗಳು ಟ್ರೆಂಡಿಂಗ್‌ನಲ್ಲಿದ್ದವು. ಇದೀಗ ಮತ್ತೆ ಹೆಂಗಳೆಯರು ಈ ಶರ್ಟ್ ಕಾಲರ್ ಬ್ಲೌಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article