ನವದೆಹಲಿ/ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಪ್ರಬಲ ಭೂಕಂಪನ (Earthquake) ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ (Delhi) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಶನಿವಾರ ರಾತ್ರಿ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
Earthquake of Magnitude:5.8, Occurred on 05-08-2023, 21:31:48 IST, Lat: 36.38 & Long: 70.77, Depth: 181 Km ,Location: Hindu Kush Region,Afghanistan for more information Download the BhooKamp App https://t.co/RXbLMDY0eW @ndmaindia @Indiametdept @KirenRijiju @Dr_Mishra1966 pic.twitter.com/1Tu1TBDqCO
— National Center for Seismology (@NCS_Earthquake) August 5, 2023
Advertisement
ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಮಾಹಿತಿ ಪ್ರಕಾರ, ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 36.38 ಮತ್ತು ರೇಖಾಂಶ 70.77 ನಲ್ಲಿ 181 ಕಿ.ಮೀ ಆಳದಲ್ಲಿ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ
Advertisement
Advertisement
ಶನಿವಾರ ರಾತ್ರಿ 9:31ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಅಫ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ಭೂಕಂಪನವಾಗಿದೆ. ಇದನ್ನೂ ಓದಿ: ಹರಿಯಾಣದಲ್ಲಿಯೂ ಘರ್ಜಿಸಿದ ಬುಲ್ಡೋಜರ್- ಅಕ್ರಮವಾಗಿ ನಿರ್ಮಿಸಿದ್ದ ಎರಡು ಡಜನ್ ಕಟ್ಟಡಗಳ ತೆರವು
Advertisement
ಭಾರತದಲ್ಲಿ ನವದೆಹಲಿ, ಎನ್‌ಸಿಆರ್, ಪಂಜಾಬ್ ಮತ್ತು ಚಂಡೀಘಡ, ಜಮ್ಮು ಮತ್ತು ಕಾಶ್ಮೀರದ ರಾಜೌರಿ, ಶ್ರೀನಗರ, ಗುಲ್ಮಾರ್ಗ್, ಕತ್ರಾ ಪ್ರದೇಶ, ಮಾತಾ ವೈಷ್ಣೋದೇವಿ ದೇಗುಲದ ಮೂಲ ಶಿಬಿರ ಮತ್ತು ಪಾಕಿಸ್ತಾನದ ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ, ಪೇಶಾವರ್ ಮತ್ತು ಇತರ ನಗರಗಳಲ್ಲಿ ಭೂಮಿ ನಡುಗಿದೆ.
Web Stories