ಬೀದರ್: ತಡರಾತ್ರಿ ಎರಡನೇ ಬಾರಿಗೆ ಲಘು ಭೂಕಂಪನದ ಅನುಭವಾಗಿ ಗ್ರಾಮಸ್ಥರು ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಕಾಲಕಳೆದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಟರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಡರಾತ್ರಿ ಸುಮಾರು 12:40ಕ್ಕೆ ಲಘು ಭೂಕಂಪನವಾಗಿದ್ದು ಜನರು ಭಯಗೊಂಡು ಮನೆಯಿಂದ ಓಡಿ ಬಂದಿದ್ದಾರೆ. ಎಲ್ಲಿ ನಿದ್ದೆ ಮಾಡಿದರೆ ಮತ್ತೆ ಭೂಕಂಪನವಾಗಿ ಅನಾಹುತವಾಗುತ್ತೋ ಎಂದು ಭಯಗೊಂಡ ಜನ ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಜಾಗರಣೆ ಮಾಡಿದ್ದಾರೆ. 5 ಸೆಕೆಂಡ್‍ಗಳ ಕಾಲ ನಡುಗಿದ ಭೂಮಿಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಗ್ರಾಮಸ್ಥರು ಭಯದಲ್ಲಿ ನಿದ್ದೆ ಮಾಡದೆ ಕುಳಿತುಕೊಂಡೆ ಭಯದಲ್ಲಿ ಬೆಳಗ್ಗೆವರೆಗೆ ಕಾಲ ಕಳೆದಿದ್ದಾರೆ.
Advertisement
ಮಂಗಳವಾರ ಭೂಮಿ ಕಂಪನವಾದಾಗ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಡಿವೈಎಸ್‍ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ರೀತಿ ಪದೇ ಪದೇ ಭೂಮಿ ನಡುತ್ತಿರುವುದಾದ್ರೂ ಏಕೆ ಎಂದು ಆತಂಕದಿಂದ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ಉತ್ತರ ನೀಡಬೇಕಾಗಿದೆ.