ಬೆಂಗಳೂರು: ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಮೂರು ಮರಗಳು ಹೂವು, ಹಣ್ಣು ಬಿಡೋ ಮೂಲಕ ಜೀವ ಕಳೆ ತುಂಬಿವೆ.
ಮಾರತ್‍ಹಳ್ಳಿಯ ರಸ್ತೆ ಬದಿ ಮರಗಳು ಇದೀಗ ಅರಳಿ ನಿಂತಿವೆ. ಹೀಗಾಗಿ ಪರಿಸರ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಮರಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.
ಕೆಲದಿನಗಳ ಹಿಂದಷ್ಟೆ ಭಿತ್ತಿಪತ್ರ ಅಂಟಿಸಲು ಕಿಡಿಗೇಡಿಗಳು ಆ್ಯಸಿಡ್ ಹಾಕಿದ್ದರು. ಸುಮಾರು 17 ಮರಕ್ಕೆ ಆ್ಯಸಿಡ್ ಎರಚಿದ್ದರು. ಇದರಿಂದ ಬೇಸರಗೊಂಡ ಪರಿಸರ ಪ್ರೇಮಿಗಳು ಮೂರು ಮರಕ್ಕೆ ಚಿಕಿತ್ಸೆ ನೀಡಿದ್ದರು. ಹೀಗಾಗಿ ಇದೀಗ ಮೂರು ಮರಗಳಲ್ಲಿ ಮತ್ತೆ ಜೀವಕಳೆ ತುಂಬಿವೆ.