ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಸ್ವಲ್ಪ ಎಚ್ಚರವಾಗಿರಿ. ಏಕೆಂದರೆ ಮರಗಳಲ್ಲಿ ಯಮರಾಜ ಅವಿತು ಕುಳಿತಿದ್ದಾನೆ. ಮಳೆ ಬಂದರೆ ಅಪ್ಪಿ ತಪ್ಪಿಯೂ ಸಿಎಂ ಕುಮಾರಸ್ವಾಮಿ ಗೃಹ ಕಚೇರಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಹೋಗಬೇಡಿ. ಏಕೆಂದರೆ ಈ ರಸ್ತೆಯಲ್ಲಿ ಮರಗಳು ಬೀಳುವ ಹಂತದಲ್ಲಿದೆ.
ಬೆಂಗಳೂರಿನಲ್ಲಿ ಮರಗಳು ಸೇಫಾಗಿಲ್ಲ. ಮಳೆ ಇಲ್ಲವೇ ಜೋರು ಗಾಳಿ ಬೀಸಿದರೆ ಮರಗಳು ಧರೆಗೆ ಉರುಳಲು ಸಿದ್ಧವಾಗಿದೆ. ಮರಗಳು ಅಪಾಯದ ಅಂಚಿಂಗೆ ಬರಲು 700 ರಿಂದ 1800 ಗಾಯಗಳಾಗಿರುವುದೇ ಕಾರಣ. ಜಾಹೀರಾತಿಗಾಗಿ ಮರಗಳಿಗೆ ಮೊಳೆ ಹೊಡೆದು ಗಾಯ ಮಾಡಿರುವ ಪ್ರಕರಣಗಳೇ ಹೆಚ್ಚಾಗುತ್ತಿದ್ದು, ನಗರದಲ್ಲಿ ಒಂದು ಆರೋಗ್ಯಕರ ಮರವಿಲ್ಲ.
Advertisement
Advertisement
ಬೆಂಗಳೂರಿನ ಸಿಎಂ ಗೃಹ ಕಚೇರಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ರಸ್ತೆಯಲ್ಲಿ ಮರಗಳು ನೆಲಕ್ಕೆ ಉರುಳಲು ಸಿದ್ಧವಾಗಿದೆ. ಈ ರಸ್ತೆಯಲ್ಲಿ ಓಡಾಡುವವರು ಹುಷಾರ್ ಆಗಿರಬೇಕು. ಅಲ್ಲದೆ ಕುಮಾರಕೃಪ ರಸ್ತೆಯಲ್ಲಂತೂ ಮರಗಳಿಗೆ ಹತ್ತಾರು ಹನಿಯಾಗಿ ಬದಲಾಗಿ ಮನುಷ್ಯಗೆ ಹಾನಿ ಮಾಡಲು ಸಜ್ಜಾಗಿದೆ.
Advertisement
Advertisement
ಸದಾಶಿವನಗರದಲ್ಲಂತೂ ರಾಜಕೀಯ ಗಣ್ಯರು, ಸಿನಿಮಾ ನಟರು ಹೆಚ್ಚಾಗಿ ವಾಸವಿದ್ದಾರೆ. ಇಲ್ಲೂ ಮರಗಳು ಬೀಳಲು ಸಿದ್ಧವಾಗಿದೆ. ಇದಕ್ಕೆ ಕಂಪನಿಗಳ ಜಾಹೀರಾತುಗಳೇ ಕಾರಣ. ನಿಗದಿಯಂತೆ ಅಪಾಯಕಾರಿ ಮರಗಳ ಕಡಿಯಲಾಗಿದೆ ಎಂದು ಪಾಲಿಕೆ ಹೇಳುತ್ತಿದೆ.