Connect with us

Districts

ಕೆಜಿಎಫ್ ನಲ್ಲಿ ಮರವೇರಿದ ಟಿಪ್ಪರ್

Published

on

ಕೋಲಾರ: ಟಿಪ್ಪರ್ ಮರಕ್ಕೆ ಡಿಕ್ಕಿಯಾಗಿದ್ದು, ಭಾರೀ ಅನಾಹುತ ತಪ್ಪಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ ನ ಫೈವ್ ಲೈಟ್ಸ್ ವೃತ್ತದಲ್ಲಿ ನಡೆದಿದೆ.

ಟಿಪ್ಪರ್ ಲಾರಿ ಕೆಜಿಎಫ್ ಟೌನ್‍ನಿಂದ ಬಂಗಾರ ಪೇಟೆ ಕಡೆಗೆ ಹೋಗುತ್ತಿತ್ತು. ಆದರೆ ಕೆಜಿಎಫ್ ನ ಫೈವ್ ಲೈಟ್ಸ್ ವೃತ್ತದಲ್ಲಿ ಇದ್ದಕ್ಕಿದ್ದಂತೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ನ ಮುಂದಿನ ಭಾಗ ಮರವೇರಿದ್ದು, ಜಖಂಗೊಂಡಿದೆ.

ಸದ್ಯಕ್ಕೆ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಭಾರೀ ಅನಾಹುತ ತಪ್ಪಿದ್ದಂತಾಗಿದ್ದು, ಟಿಪ್ಪರ್ ನ ಚಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಉರಿಗಾಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ತೆರವುಗೊಳಿಸಿದ್ದಾರೆ.

ಇನ್ನು ಈ ಅಪಘಾತದ ಫೋಟೋವನ್ನು ನೋಡಿದರೆ ಟಿಪ್ಪರ್ ಲಾರಿ ಮರವನ್ನೇರಲು ಪ್ರಯತ್ನಿಸಿದಂತೆ ಭಾಸವಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *