ಚಿಕ್ಕಮಗಳೂರು: ಕಲ್ಲತ್ತಿಗಿರಿಯಲ್ಲಿ (Kallathigiri) ಭಾರೀ ಗಾಳಿಯಿಂದ 100 ವರ್ಷಗಳ ಹಳೆಯದಾದ ಬೃಹತ್ ಅರಳಿ ಮರ ಧರೆಗುರುಳಿದ್ದು, ಆಟೋ ಹಾಗೂ ಕಾರು (Car) ಜಖಂಗೊಂಡಿವೆ. ಪರಿಣಾಮ ಆಟೋ ಚಾಲಕನ ಕೈ ಮುರಿದಿದೆ.
ತರೀಕೆರೆ ತಾಲೂಕಿನ ಕಲ್ಲತ್ತಿಗರಿ ದೇವಸ್ಥಾನದ ಬಳಿ ಈ ಅವಘಡ ನಡೆದಿದೆ. ಈ ಅವಘಡದಿಂದ ಆಟೋ ಹಾಗೂ ಕಾರಿ ಜಖಂ ಆದರೂ, ಅದರಲ್ಲಿದ್ದವರು ಜೀವಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸುಹಾಸ್ ಹತ್ಯೆಯಲ್ಲಿ ಮುಸ್ಲಿಂ ಹೆಡ್‌ಕಾನ್ಸ್‌ಟೇಬಲ್ ಭಾಗಿಯಾಗಿದ್ದಾರೆಂದು ಅವಹೇಳನ – ಇಬ್ಬರು ಹಿಂದೂ ಮುಖಂಡರ ವಿರುದ್ಧ FIR
ಗಾಯಗೊಂಡ ಚಾಲಕ ತರೀಕೆರೆ ತಾಲೂಕಿನ ಗೇರಮರಡಿ ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ದಾವಣಗೆರೆ ಮೂಲದದವರಾಗಿದ್ದರು. ಎರಡೂ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲ್ಲತ್ತಿಗಿರಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಅದೃಷ್ಟವಶಾತ್ ಹೆಚ್ಚಿನ ಜನ ಸೇರಿದ್ದಾಗ ಈ ಅವಘಡ ಸಂಭವಿಸಿದ್ದರೆ ಭಾರೀ ಅನಾಹುತ ಆಗುತ್ತಿತ್ತು. ಇದನ್ನೂ ಓದಿ: ಮೈನಿಂಗ್ ಕೇಸಲ್ಲಿ 7 ವರ್ಷ ಜೈಲು – ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ರೆಡ್ಡಿ?