ಚಿಕ್ಕಮಗಳೂರು: ಭಾರೀ ಗಾಳಿ ಮಳೆಗೆ (Rain) ಆಟೋ (Auto) ಮೇಲೆ ಮರ ಮುರಿದುಬಿದ್ದು, ಚಾಲಕ ಮೃತಪಟ್ಟ ಘಟನೆ ಕೊಪ್ಪ (Koppa) ತಾಲೂಕಿನ ಭೈರೇದೇವರು ಗ್ರಾಮದಲ್ಲಿ ನಡೆದಿದೆ.
ಮೃತ ಆಟೋ ಚಾಲಕನನ್ನು ರತ್ನಾಕರ್ ಎಂದು ಗುರುತಿಸಲಾಗಿದೆ. ಭಾರೀ ಗಾಳಿ ಮಳೆಗೆ ಮರ ಆಟೋ ಮೇಲೆ ಬಿದ್ದಿದೆ, ಪರಿಣಾಮ ಆಟೋ ಜಖಂ ಆಗಿದೆ. ಅದರಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಲ್ಲತ್ತಿಗಿರಿಯಲ್ಲಿ ಧರೆಗುರುಳಿದ ಬೃಹತ್ ಮರ – ಆಟೋ, ಕಾರು ಜಖಂ, ಓರ್ವನ ಕೈ ಮುರಿತ
ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು, ನಾಳೆ (26) ಸಹ ಮಳೆ ಮುಂದುವರೆಯಲಿದೆ ಎಂದು ವರದಿಯಾಗಿದೆ.
ಮೇ 6 ರಂದು ಜಿಲ್ಲೆಯ ಕಲ್ಲತ್ತಿಗಿರಿಯಲ್ಲಿ (Kallathigiri) ಭಾರೀ ಗಾಳಿಯಿಂದ 100 ವರ್ಷಗಳ ಹಳೆಯದಾದ ಬೃಹತ್ ಅರಳಿ ಮರ ಧರೆಗುರುಳಿತ್ತು. ಈ ವೇಳೆ ಆಟೋ ಹಾಗೂ ಕಾರು (Car) ಜಖಂಗೊಂಡಿದ್ದವು. ಪರಿಣಾಮ ಆಟೋ ಚಾಲಕನ ಕೈ ಮುರಿದಿತ್ತು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರ – ಹಳ್ಳಕ್ಕೆ ಉರುಳಿದ ಕಾರುಗಳು!