ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ (Charmady Ghat) ಗಾಳಿ ಮಳೆಯ (Rain) ಅಬ್ಬರ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿರುವ ಅಣ್ಣಪ್ಪ ಸ್ವಾಮಿ ದೇಗುಲದ (Ghati Annappa Temple) ಬಳಿ ಕಾರೊಂದು ಪಾಸ್ ಆಗುತ್ತಿದ್ದಂತೆ ಮರದ ರೆಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಕಾರಲ್ಲಿದ್ದ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಪ್ರವಾಸಿಗರು ಧರ್ಮಸ್ಥಳದಿಂದ ಬರುತ್ತಿದ್ದರು. ಈ ವೇಳೆ, ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಕಾರು ಬರುತ್ತಿದ್ದಂತೆ ಮರ ಮುರಿದು ಬಿದ್ದಿದೆ. ಅಕಸ್ಮಾತ್ ಮರ ಕಾರಿನ ಮೇಲೆ ಬಿದ್ದಿದ್ದರೆ ದೊಡ್ಡ ಮಟ್ಟದ ಅನಾಹುತವಾಗುತ್ತಿತ್ತು. ಇದನ್ನೂ ಓದಿ: ಮುಂಗಾರು ಅಬ್ಬರ, ಜಲಾಶಯಗಳು ಬಹುತೇಕ ಭರ್ತಿ – ಗುರ್ಜಾಪುರ ಬ್ಯಾರೇಜ್ನ 194 ಗೇಟ್ ಓಪನ್
ಕೊಟ್ಟಿಗೆಹಾರದ ಸ್ಥಳೀಯ ಯುವಕರು ಹಾಗೂ ಬಣಕಲ್ ಠಾಣೆ ಪೊಲೀಸರು ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವಕರ ಜೀವಕ್ಕೆ ಬೆಲೆಯೇ ಇಲ್ಲ, ಪೂರ್ವನಿಯೋಜಿತವಾಗಿ ಕೊಲೆ: ರಿಯಾಜ್ ಕಡಂಬು ಆಕ್ರೋಶ