– ನಿಧಿಗಳ್ಳರ ಹಾವಳಿಗೆ ಭಯಭೀತರಾದ ಗ್ರಾಮಸ್ಥರು
ಚಿಕ್ಕಬಳ್ಳಾಪುರ: ನಿಧಿ ಆಸೆಗಾಗಿ ನಾಗರಹಾವು ಹಾಗೂ ಕರಿ ಮೇಕೆ ಬಲಿ ಕೊಟ್ಟಿರುವ ವಿಚಿತ್ರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ಕೂಗಳತೆ ದೂರದ ಮುನೇಗೌಡ ಅವರ ರಾಗಿ ಹೊಲದಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿದ್ದ ಹುತ್ತವನ್ನ ಅಗೆದು ನಿಧಿಗಳ್ಳರು ಆಳವಾದ ಗುಂಡಿ ತೆಗೆದು, ವಿಚಿತ್ರ ಪೂಜೆ ಪುನಸ್ಕಾರ ನೇರವೇರಿಸಿದ್ದಾರೆ. ಈ ಜಮೀನಿನಲ್ಲಿ ವೀರಗಲ್ಲುಗಳು ಇದ್ದವು ಎನ್ನಲಾಗಿದ್ದು, ನಿಧಿ ಇರಬಹದು ಎಂದು ಆಸೆಗಾಗಿ ಈ ಕೃತ್ಯ ಮಾಡಿರುವ ಶಂಕೆ ಗ್ರಾಮಸ್ಥರದ್ದಾಗಿದೆ. ಇದನ್ನೂ ಓದಿ: ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್
Advertisement
Advertisement
ಈ ಘಟನೆಯಿಂದ ಭಯಭೀತರಾಗಿರುವ ಸತ್ತಲಿನ ಗ್ರಾಮಸ್ಥರು, ನಿಧಿ ಆಸೆಗಾಗಿ ಇಂದು ಪ್ರಾಣಿ ಬಲಿ ಕೊಟ್ಟಿದ್ದಾರೆ ಮುಂದೆ ನರಬಲಿಯೂ ಕೊಡಬಹುದು ಎಂದು ಆತಂಕಕ್ಕೀಡಾಗಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ನಿಧಿಗಳ್ಳರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.