ನವದೆಹಲಿ: ಇನ್ನು ಮುಂದೆ ಪ್ರಯಾಣಿಕರು ನೇರವಾಗಿ ರೈಲ್ವೇ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್(IRCTC) ಆಡುಗೆ ಕೋಣೆಯಲ್ಲಿ ಆಹಾರಗಳನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವುದನ್ನು ನೋಡಬಹುದು.
ಹೌದು. ಭಾರತೀಯ ರೈಲ್ವೇ ಪ್ರಯಾಣಿಕರಿಗೆ ವಿತರಿಸಲಾಗುವ ಆಹಾರದ ಗುಣಮಟ್ಟದ ಮೇಲೆ ನಿಗಾವಹಿಸಲು ತನ್ನ ಎಲ್ಲ ಅಡುಗೆ ಕೋಣೆಗಳಲ್ಲಿ ಸಿಸಿ ಟಿವಿ ಅಳವಡಿಸಲು ನಿರ್ಧರಿಸಿದೆ.
Advertisement
ರೈಲುಗಳಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಪಾಡುವ ಹಾಗೂ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Advertisement
ಪ್ರಯಾಣಿಕರು IRCTC ವೆಬ್‍ಸೈಟ್ ಮೂಲಕ ಅಡುಗೆ ಕೋಣೆಗಳ ನೇರ ದೃಶ್ಯಗಳನ್ನು ನೋಡಬಹುದಾಗಿದೆ. ಪ್ರಯಾಣಿಕರಿಗೆ ಭದ್ರತೆ ಜೊತೆಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
Advertisement
ಈ ನಿಟ್ಟಿನಲ್ಲಿ ಈಗಾಗಲೇ ದೆಹಲಿ, ಮುಂಬೈ ಹಾಗೂ ಭುವನೇಶ್ವರ್ ಸೇರಿದಂತೆ 16 ಮುಖ್ಯ ಆಡುಗೆ ಕೋಣೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಈ ಅಡುಗೆ ಕೋಣೆಗಳು ವಿಜನ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿ ಉಂಟಾಗುವ ಅವ್ಯವಸ್ಥೆಯನ್ನು ಗುರುತಿಸಲು ಸಹಾಯಕವಾಗಿದೆ.
Advertisement
ಇಲ್ಲಿ ಅಡುಗೆ ತಯಾರಕರ ಮೇಲೂ ನಿಗಾವಹಿಸಲಾಗುತ್ತದೆ. ಅವರು ಸಮವಸ್ತ್ರ ಧರಿಸದಿದ್ದರೂ ಅಲ್ಲಿನ ಕಂಟ್ರೋಲರ್ ಗೆ ವರದಿ ನೀಡುತ್ತದೆ. ಕಂಟ್ರೋಲರ್ ಕ್ರಮ ಕೈಗೊಳ್ಳದೇ ಹೋದರೆ ನೇರವಾಗಿ ರೈಲ್ವೇ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗುತ್ತದೆ.
ರೈಲ್ವೆ ಇಲಾಖೆ IRCTC ಕೆಲ ದಿನ ಗಳ ತನ್ನ ವೆಬ್‍ಸೈಟ್ ಅನ್ನು ಅಪ್‍ಡೇಟ್ ಮಾಡಿತ್ತು. ಸದ್ಯಕ್ಕೆ ಬಿಡುಗಡೆಯಾಗಿರುವ ಬೀಟಾ ಆವೃತ್ತಿ ವೆಬ್‍ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ಈ ವಿಶೇಷತೆ ಸೇರ್ಪಡೆಯಾಗಲಿದೆ.