ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗೋ ಪ್ರವಾಸಿಗರೇ ಎಚ್ಚರವಾಗಿರಿ ಹೆಬ್ಬಾಳೆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.
ಮೂಡಿಗೆರೆ ತಾಲೂಕಿನ ಹೆಬ್ಬಾಳೆ ಸೇತುವೆ ಭದ್ರಾ ನದಿಯ ರಭಸಕ್ಕೆ ಸೇತುವೆ ಮೇಲಿನ ಸಿಮೆಂಟ್ ಕಿತ್ತು ಹೋಗಿದೆ. ಸಿಮೆಂಟ್ ಕಿತ್ತು ಸೇತುವೆಯ ಕಬ್ಬಿಣದ ಸರಳುಗಳು ಕಾಣುತ್ತಿವೆ. ಅಷ್ಟೇ ಅಲ್ಲದೇ ಸೇತವೆಯ ಮಧ್ಯದಲ್ಲಿ ರಂಧ್ರಗಳಾಗಿವೆ. ಜೊತೆಗೆ ಸೇತುವೆ ಅಲ್ಲಲ್ಲೇ ಬಿರುಕು ಬಿಟ್ಟಿದ್ದು, ಸೇತುವೆಗೆ ತಡೆಗೋಡೆ ಕೂಡ ಇಲ್ಲ. ಸೇತುಗೆ ಇದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿವೆ. ಪ್ರವಾಸಿಗರು ಹಾಗೂ ಭಕ್ತರು ಎಚ್ಚರಿಕೆಯಿಂದ ಸಂಚರಿಸೋದು ಒಳ್ಳೆಯದು.
Advertisement
Advertisement
ಕೆಲವು ದಿನಗಳಿಂದ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಎಲ್ಲ ನದಿಗಳು ತುಂಬಿ ಹರಿಯುತ್ತಿದೆ. ಇದರಿಂದ ಭದ್ರಾ ನದಿಯೂ ತುಂಬಿ ಹೆಬ್ಬಾಳೆ ಸೇತುವೆ ಕೂಡ ಮುಳುಗಿತ್ತು. 1992ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತುವೆಗೆ ತಡೆಗೋಡೆಗಳು ಇರಲಿಲ್ಲ. ತೀರಾ ಕೆಳಮಟ್ಟದಲ್ಲಿರುವುದರಿಂದ ಭದ್ರಾ ನದಿ ಉಕ್ಕಿ ಹರಿದರೆ ಸೇತುವೆ ಮುಳುಗಡೆಯಾಗುತ್ತೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.