-ನಿಯಮಗಳು ಉಲ್ಲಂಘನೆಯಾದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ
ಹುಬ್ಬಳ್ಳಿ: ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ಕಾನೂನು ಬಾಹಿರ. ಉಲ್ಲಂಘನೆಯಾಗಿ ಜನರನ್ನು ಕರೆದುಕೊಂಡು ಹೋದರೆ ಅತ್ಯಂತ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಹುಬ್ಬಳ್ಳಿಯಲ್ಲಿ (Hubballi) ರಾಜ್ಯ ಸಂಚಾರ ಮತ್ತು ಅಪರಾಧ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಗೂಡ್ಸ್ ವಾಹನದಲ್ಲಿ ಜನರು ಪ್ರಯಾಣಿಸುವುದು ಸರಿಯಲ್ಲ. ಒಂದು ವೇಳೆ ವಾಹನ ಅಪಘಾತ ಆದರೆ 10-15 ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಯಾರು ಗೂಡ್ಸ್ ವಾಹನದಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಾರೋ ಅಂತವರ ಮೇಲೆ ಮುಲಾಜಿಲ್ಲದೆ ಕೇಸ್ ದಾಖಲು ಮಾಡುತ್ತೇವೆ. ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನದ ಪರಮಿಟ್ ಕೂಡ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತದ ನಡುವೆ ಮಂಡ್ಯ ನಗರಸಭೆ ಗದ್ದುಗೆ ಏರಿದ ಜೆಡಿಎಸ್-ಬಿಜೆಪಿ
ರಾಜ್ಯದಲ್ಲಿ ಎರಡು ಚಕ್ರದ ಸಂಚಾರದಿಂದ 60% ಹಾಗೂ 20% ಪಾದಚಾರಿಗಳಿಂದ ಸಾವಾಗುತ್ತಿದೆ. ಹಾಗಾಗಿ ಸಂಚಾರ ನಿಯಮಗಳು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ವೀಡಿಯೋ ಕಾಲ್ – ತನಿಖಾಧಿಕಾರಿಗಳ ಮುಂದೆ ದರ್ಶನ್ ಜಾಣನಡೆ!