– ಆರೋಗ್ಯ ಇಲಾಖೆಯಿಂದ ಟ್ರಾವೆಲ್ ಹಿಸ್ಟರಿ ಬಿಡುಗಡೆ
– ಬೆಂಗಳೂರಲ್ಲಿ ಅತಿ ಹೆಚ್ಚು ಜನರ ಸಂಪರ್ಕ
– ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಆರೋಗ್ಯ ಇಲಾಖೆ
ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿ ಈಗ ವಿಶ್ವದೆಲ್ಲೆಡೆ ಭಯ ಮೂಡಿಸಿರುವ ಕೊರೊನಾ ವೈರಸ್ ಇದೀಗ ರಾಜ್ಯದ ಜನರಲ್ಲೂ ಭೀತಿ ಉಂಟು ಮಾಡಿದೆ. ಈ ಮಧ್ಯೆ ಕೊರೊನಾ ಪೀಡಿತ ಟೆಕ್ಕಿಯೊಬ್ಬರು ಬೆಂಗಳೂರಿನ ಕೆಲವೆಡೆ ಸಂಚರಿಸಿದ್ದು, ಇದೀಗ ಮತ್ತಷ್ಟು ಆತಂಕ ಉಂಟುಮಾಡಿದೆ.
Advertisement
ಹೌದು. ಕೊರೊನಾ ಕೇಸ್ ಪತ್ತೆಯಾದ 8ನೇ ವ್ಯಕ್ತಿ ಎಲ್ಲೆಲ್ಲಿ ಸಂಚರಿಸಿದ್ದಾನೆ ಎಂಬುದರ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಟೆಕ್ಕಿಯ ಈ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿಬೀಳುವಂತೆ ಮಾಡಿದೆ.
Advertisement
ಸೋಂಕಿತ ವ್ಯಕ್ತಿ ಅತಿ ಹೆಚ್ಚು ಜನರನ್ನು ಸಂಪರ್ಕಿಸಿದ್ದ ಹಿನ್ನೆಲೆಯಲ್ಲಿ ಕೆಸ್ ಪತ್ತೆಯಾದ 8ನೇ ವ್ಯಕ್ತಿಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
Advertisement
Advertisement
ಮೈಂಡ್ ಟ್ರೀ ಕಂಪನಿ ಟೆಕ್ಕಿ ಜೊತೆ ತೆರಳಿದ್ದ ಸಹೋದ್ಯೋಗಿಗೆ ಕೊರೊನಾ ಇರುವುದು ಸೋಮವಾರ ಸಂಜೆ ದೃಢಪಟ್ಟಿತ್ತು. ಟೆಕ್ಕಿ ಮಾರ್ಚ್ 6ರಂದು ಅಮೇರಿಕದಿಂದ ಲಂಡನ್ ಗೆ ತೆರಳಿದ್ದ. ಮಾರ್ಚ್ 8 ರಂದು ಲಂಡನ್ ಮೂಲಕ ಬೆಂಗಳೂರಿಗೆ ಆಗಮಿಸಿದ್ದ.
ಮಾರ್ಚ್ 9 ನಗರದ ಟೆನ್ನಿಸ್ ಕೋರ್ಟಿಗೆ ತೆರಳಿದ್ದ. ಬಳಿಕ ಅಂದರೆ ಮಾರ್ಚ್ 9, 10, 11ರಂದು ಮತ್ತೆ ಟೆನ್ನಿಸ್ ಕೋರ್ಟಿನಲ್ಲಿ ಅನೇಕರ ಜೊತೆ ಟೆನ್ನಿಸ್ ಕೂಡ ಆಟವಾಡಿದ್ದ. ಮಾರ್ಚ್ 10ರಂದು ತನ್ನ ಇಬ್ಬರು ಸ್ನೇಹಿತರನ್ನು ಭೇಟಿಯಾಗಿದ್ದ. ಬೆಳಗ್ಗೆ ನಗರದ ಮಡಿವಾಳದ ಥಿಯೇಟರ್ ಒಂದರಲ್ಲಿ ಪತ್ನಿ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾನೆ.
ಮಾರ್ಚ್ 11ರಂದು ಆರೋಗ್ಯಾಧಿಕಾರಿಗಳು ವ್ಯಕ್ತಿಯ ಸಂಪರ್ಕ ಮಾಡಿ ಮನೆಯಲ್ಲಿಯೇ ಉಳಿಯುವಂತೆ ಸೂಚನೆ ನೀಡಿದ್ದರು. ಮಾರ್ಚ್ 12, 13ರಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಬರುವಂತೆ ಸೂಚನೆ ನೀಡಿದ್ದರೂ ಟೆಕ್ಕಿ ಮಾತ್ರ ಆಸ್ಪತ್ರೆಗೆ ಹೋಗದೇ ನಿರ್ಲಕ್ಷ್ಯ ತೋರಿದ್ದ.
ಕೊನೆಗೆ ಮಾರ್ಚ್ 14ರಂದು ಮಧ್ಯಾಹ್ನ 2:30ಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ಅಸ್ಪತ್ರೆಗೆ ತೆರಳಿದ್ದ. ಇಲ್ಲಿ ಪರೀಕ್ಷೆ ಮಾಡಿದಾಗ ವೈದ್ಯರಿಗೆ ಈತನ ಸೋಂಕು ಬಂದಿರುವ ಸಂಶಯ ಹೆಚ್ಚಾಗಿತ್ತು. ಅಲ್ಲಿಂದ ಮಾರ್ಚ್ 15 ರಾತ್ರಿ 9:30ಕ್ಕೆ ಆರೋಗ್ಯ ಇಲಾಖೆ ಸೂಚನೆಯಂತೆ ಮತ್ತೊಂದು ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಅತಿ ಹೆಚ್ಚು ಜನರ ಸಂಪರ್ಕ ಈ ಟೆಕ್ಕಿಗೆ ಆಗಿದೆ. ಥಿಯೇಟರ್ ಮತ್ತು ಟೆನ್ನಿಸ್ ಕೋರ್ಟ್ ಗೆ ತೆರಳಿದ್ದ ಹಿನ್ನೆಲೆಯಲ್ಲಿ ಈ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪತ್ತೆಗಾಗಿ ಆರೋಗ್ಯ ಇಲಾಖೆ ಈಗ ಮುಂದಾಗಿದೆ.