ನವದೆಹಲಿ: ಪಾಕಿಸ್ತಾನದ ನೂತನ ಪ್ರಧಾನಿ ಪದವಿ ಸ್ವೀಕಾರ ಸಮಾರಂಭದಲ್ಲಿ ಪಾಕ್ ರಕ್ಷಣಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ, ಕಾಂಗ್ರೆಸ್ ಪಕ್ಷದ ಮುಖಂಡ ನವಜೋತ್ ಸಿಂಗ್ ಸಿಧು, ದಕ್ಷಿಣ ಭಾರತದ ಭೇಟಿಗಿಂತ ಪಾಕಿಸ್ತಾನದ ಭೇಟಿ ನನಗೆ ಉತ್ತಮವಾಗಿತ್ತು ಎಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಧು ಆಪ್ ಮುಖಂಡರೊಬ್ಬರ ಪ್ರಶ್ನೆಗೆ ಉತ್ತರಿಸಿ ಈ ಹೇಳಿಕೆ ನೀಡಿದ್ದಾರೆ. ನಾನು ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡ ವೇಳೆ ಅಲ್ಲಿನ ಭಾಷೆಯನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗಿತ್ತು. ಅಲ್ಲದೇ ಆಹಾರ, ಸಾಂಪ್ರದಾಯ, ಸಂಸ್ಕೃತಿ ಎಲ್ಲವೂ ಕೂಡ ಭಿನ್ನವಾಗಿತ್ತು. ಆದರೆ ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಎಲ್ಲವೂ ಒಂದೇ ಆಗಿತ್ತು. ಇಂಗ್ಲಿಷ್ ಭಾಷೆಯಲ್ಲಿ 10 ಬಾರಿ ನಿಮ್ಮನ್ನು ಬೈಯುವುದಕ್ಕಿಂತ ಒಮ್ಮೆ ಪಂಜಾಬಿ ಭಾಷೆಯಲ್ಲಿ ಬೈದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ತನ್ನದೇ ದೇಶದ ಸಂಸ್ಕೃತಿ ಹಾಗೂ ಭಾಷೆಯಗೆ ಗೌರವ ನೀಡದೇ ಪಾಕ್ ಭೇಟಿ ಅತ್ಯುತ್ತಮ ಎಂದು ಹೇಳಿರುವ ಸಿಧು ನಡೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡುವ ಪಂಜಾಬ್ ಅಕಾಲಿ ದಳದ ಹಿರಿಯ ಮುಖಂಡರೊಬ್ಬರು, ಭಾರತವನ್ನು ತುಳಿಯಲೆಂದೇ ಪಾಕಿಸ್ತಾನವನ್ನು ಹೊಗಳುತ್ತಾರೆ ಎಂದು ಟೀಕಿಸಿದ್ದಾರೆ.
Advertisement
ಇತ್ತ ಬಿಜೆಪಿ ಪಕ್ಷದ ಮುಖಂಡರು ಕೂಡ ಸಿಧು ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ಟೀಕಿಸಿದ್ದು, ಇಂತಹ ಹೇಳಿಕೆಗಳು ಸಹಿಸಿಕೊಳ್ಳುವಂತದಲ್ಲ ಎಂದು ಕಿಡಿಕಾರಿದ್ದಾರೆ. ದಕ್ಷಿಣ ಭಾರತವನ್ನು ಪಾಕಿಸ್ತಾನಕ್ಕೆ ಹೊಲಿಕೆ ಮಾಡಿರುವುದು ಖಂಡನಾರ್ಹವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ತಿಳಿಸಿದ್ದಾರೆ.
Advertisement
ಈ ಹಿಂದೆ ಪಾಕ್‍ಗೆ ಭೇಟಿ ನೀಡಿದ್ದ ಸಿಧು ನಡೆಯನ್ನು ಸಮರ್ಥಿಸಿಕೊಂಡಿದ್ದ ಇಮ್ರಾನ್ ಖಾನ್, ಸಿಧು ಒಬ್ಬ ಶಾಂತಿಯ ರಾಯಭಾರಿ ಎಂದು ಹಾಡಿಹೊಗಳಿದ್ದರು. ಭಾರತದಲ್ಲಿ ಸಿಧು ವಿರುದ್ಧ ಆರೋಪ ಮಾಡುತ್ತಿರುವುದು ಶಾಂತಿ ಮಂತ್ರಕ್ಕೆ ತೋರುತ್ತಿರುವ ಅಗೌರವ. ಶಾಂತಿ ಇಲ್ಲದೇ ನಮ್ಮ ಜನರ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Only a CONgi Slave like Navjot Singh Sidhu would compare Pakistan to South India and declare that the Terrorist Nation is better than South India.
Jokers who don't have any idea about South India's culture & language should keep their idiotic mouth shut.
— C T Ravi ???????? ಸಿ ಟಿ ರವಿ (@CTRavi_BJP) October 13, 2018