– ಭಾರತ ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟನೆ
– 3 ಲಕ್ಷ ಪುಟಗಳ ಫೈಲ್‌ನ ರಹಸ್ಯಗಳೇನು?
ವಾಷಿಂಗ್ಟನ್/ನವದೆಹಲಿ: ಜೆಫ್ರಿ ಎಪ್‌ಸ್ಟೀನ್ (Jeffrey Epstein) ಜಾಗತಿಕ ಮಟ್ಟದಲ್ಲಿ ಸಂಚಲನ ಮಾಡಿಸಿತ್ತು. ದಶಕಗಳ ಕಾಲ ನಡೆದ ವ್ಯವಸ್ಥಿತ ಲೈಂಗಿಕ ಶೋಷಣೆಯ ಕರಾಳ ಮುಖವನ್ನ ಜಗತ್ತಿನ ಮುಂದೆ ತೆರೆದಿಟ್ಟಿತ್ತು. ಇದೀಗ 2ನೇ ಫೈಲ್ (Epstein files) ರಿಲೀಸ್ ಆಗಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಸ್‌ಸ್ಟೈನ್‌ನ ದುಷ್ಕೃತ್ಯಗಳ ತನಿಖೆಗೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆಗಳನ್ನ ಅಮೆರಿಕದ ನ್ಯಾಯಾಂಗ ಇಲಾಖೆ (US Justice Department) ಬಿಡುಗಡೆ ಮಾಡಿದೆ.
ಅಮೆರಿಕದ ನ್ಯಾಯಾಂಗ ಇಲಾಖೆ 3 ಲಕ್ಷ ಪುಟಗಳ ಫೈಲ್ ರಿಲೀಸ್ ಮಾಡಿದೆ. ಇದರಲ್ಲಿ ಪ್ರಭಾವಿಗಳ ಪಟ್ಟಿಯೇ ತುಂಬಿದೆ. ಈ ಪಟ್ಟಿಯಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಬಿಲ್ ಗೇಟ್ಸ್, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವ್ ಟಿಶ್ಚ್, ಬ್ರಿಟಿಷ್ ಬಿಲಿಯನೇರ್ ರಿಚರ್ಡ್ ಬ್ರಾನ್ಸನ್ ಸೇರಿದಂತೆ ಹಲವರ ಹೆಸರು ಕಾಣಿಸಿಕೊಂಡಿದೆ.
ಕೆಲವು ದಾಖಲೆಗಳು ಟ್ರಂಪ್ ವಿರುದ್ಧ ಸುಳ್ಳು ಆರೋಪಗಳನ್ನ ಹೊಂದಿವೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ. ಆದ್ರೆ, ಬಿಡುಗಡೆಯಾದ ಈ ಫೈಲ್ ಅಮೆರಿಕದಲ್ಲಿ ಸಂಚಲನ ಮೂಡಿಸಿದೆ. ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ಎಫ್‌ಬಿಐ ಸಂಗ್ರಹಿಸಿದ ಪಟ್ಟಿಯೂ ಸೇರಿದೆ. 2,000ಕ್ಕೂ ಹೆಚ್ಚು ವಿಡಿಯೊಗಳು ಮತ್ತು 1,80,000 ಚಿತ್ರಗಳನ್ನ ಇದು ಹೊಂದಿದೆ ಎಂದು ಯುಎಸ್ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಹೇಳಿದ್ದಾರೆ.
ಮೋದಿ ಇಸ್ರೇಲ್ ಭೇಟಿಯ ಉಲ್ಲೇಖ
ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಕಡತದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿಚಾರವನ್ನೂ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಅಮೆರಿಕ ರಿಲೀಸ್ ಮಾಡಿದ ಕಡತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿಯ ವಿಚಾರ ಉಲ್ಲೇಖಿಸಿರುವ ವರದಿಗಳನ್ನ ನಾವು ನೋಡಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು 2017ರ ಜಯಲೈನಲ್ಲಿ ಇಸ್ರೇಲ್‌ಗೆ ಅಧೀಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್‌ನಲ್ಲಿರುವ ಪ್ರಸ್ತಾಪಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬರ ಕೆಟ್ಟ ಆಲೋಚನೆಗಳಿಗಿಂತ ಹೆಚ್ಚೇನೂ ಅಲ್ಲ. ಇದನ್ನು ಅತ್ಯಂತ ತಿರಸ್ಕಾರದಿಂದ ವಜಾಗೊಳಿಸಲು ಅರ್ಹವಾಗಿದೆ ಎಂದು ಹೇಳಿದ್ದಾರೆ.
1992 ರಲ್ಲಿ ಭಾರತ ಮತ್ತು ಇಸ್ರೇಲ್ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನ ಸ್ಥಾಪಿಸಿತ್ತು. ಇದಾದ ಬಳಿಕ 2017ರ ಜುಲೈ ಮಾಹೆಯಲ್ಲಿ ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಇದು ಭಾರತೀಯ ಪ್ರಧಾನಿಯೊಬ್ಬರು ದೇಶಕ್ಕೆ ಕಾಲಿಟ್ಟ ಮೊದಲ ಮತ್ತು ಐತಿಹಾಸಿಕ ಘಟನೆಯಾಗಿತ್ತು. ಆದ್ರೆ ಅಮೆರಿಕ ನ್ಯಾಯಾಂಗ ಇಲಾಖೆ ಎಪ್‌ಸ್ಟೀನ್ ಪ್ರಕರಣದ 2ನೇ ಫೈಲ್ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಘಟನೆಯ ಬಗ್ಗೆ ಉಲ್ಲೇಖ ಮಾಡಿರುವುದು ಬೆಳಕಿಗೆ ಬಂದಿದೆ.



