ತಿರುವನಂತಪುರಂ: ಕೇರಳದ ಜೋಡಿಯೊಂದು ತಮ್ಮ ಲಿಂಗ ಬದಲಾಯಿಸಿಕೊಂಡು ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ನಾವು ಈಗ ಅಧಿಕೃತವಾಗಿ ಒಂದು ಜೋಡಿ ಆಗಿದ್ದೇವೆ. ನಾವು ಕೂಡ ಪ್ರೀತಿಸಿ ಮದುವೆಯಾಗಬಹುದೆಂದು ಇಡೀ ಜಗತ್ತಿಗೆ ನಾವು ಪತಿ-ಪತ್ನಿಯಾಗಿ ತೋರಿಸಿದ್ದೇವೆ ಎಂದು ವಧು ಸೂರ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾದ ನಂತ್ರ ಗೊತ್ತಾಯ್ತು ವರ ಅವನಲ್ಲ ಅವಳು!
ನನ್ನ ಪೋಷಕರಿಗೆ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಾನು ಸಬೀನಾ ನಿಂದ ಇಶಾನ್ ಆಗಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಇದ್ದಕ್ಕೆ ನನ್ನ ಪೋಷಕರ ಸಹಾಯ ಹಾಗೂ ಆರ್ಶೀವಾದ ಕೂಡ ನನಗೆ ಬೇಕಾಗಿತ್ತು. ಮುಖ್ಯವಾಗಿ ನನ್ನ ತಾಯಿಯ ಆರ್ಶೀವಾದ ಬೇಕಿತ್ತು. ನಂತರ ನನ್ನ ಮದುವೆಯಲ್ಲಿ ನನ್ನ ತಂದೆ, ತಾಯಿ ಹಾಗೂ ನನ್ನ ಸಹೋದರಿ ಮದುವೆಯಲ್ಲಿ ಭಾಗಿಯಾಗಿದ್ದರಿಂದ ನನಗೆ ಬಹಳ ಸಂತೋಷವಾಯಿತು ಎಂದು ವರ ಇಶಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯ 1 ವರ್ಷದ ಬಳಿಕ ಗೊತ್ತಾಯ್ತು, ಅವನಲ್ಲ ಅವಳು – ಹೆಣ್ತನ ಮರೆ ಮಾಡಲು ಬಳಸಿದ್ದಳು ಸೆಕ್ಸ್ ಟಾಯ್
ಮದುವೆಯಾದ ನಂತರ ಈ ಜೋಡಿ ಭೋಜನಕ್ಕೆ ತೆರಳುವಾಗಲೂ ಕೇರಳದ ಸದ್ಯ ಸಂಪ್ರದಾಯದಂತೆ ಬಾಳೆ ಎಲೆಯಲ್ಲಿ ಊಟ ಹಾಕಲಾಯಿತು. ಅಲ್ಲಿ ಕೂಡ ದಂಪತಿಯ ಕುಟುಂಬದವರು ಹಾಗೂ ತೃತೀಯ ಲಿಂಗಿಯ ಸಂಘದವರು ಕೂಡ ಮದುವೆ ಮನೆಗೆ ಆಗಮಿಸಿದ್ದರು. ಇದನ್ನೂ ಓದಿ: ಅವಳಾಗಿ ಬದಲಾದ ಅವನು, ಅವನಾಗಿ ಬದಲಾದ ಅವಳು- ಈಗ ಅವನಿಗೂ ಅವಳಿಗೂ ಮದ್ವೆ
ನನ್ನ ತಾಯಿ ಮದುವೆಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಇಶಾನ್ ಜೊತೆ ನನ್ನ ಮದುವೆಯಾಗಲೂ ಅವರ ಸಹಕಾರವಿತ್ತು. ಮದುವೆ ದಿನ ರಾತ್ರಿ ಅವರು ಬಂದು ನಮಗೆ ಆರ್ಶೀವಾದ ನೀಡಿದ್ದರು. ಆದರೆ ನನ್ನ ಜೊತೆ ರೆಂಜು ರೆಜೀಮಾ ಇದ್ದರು. ಅವರು ಕೂಡ ನನಗೆ ತಾಯಿಯಂತೆ ಇದ್ದರು ಎಂದು ವಧು ಸೂರ್ಯ ಹೇಳಿದ್ದಾರೆ. ಇದನ್ನೂ ಓದಿ: ಸಂಪ್ರದಾಯದಂತೆ ‘ಗೇ ಲವ್ವರ್’ ಜೊತೆ ಮದುವೆಯಾದ ಭಾರತದ ಎಂಜಿನಿಯರ್
ತೃತೀಯ ಲಿಂಗದ ಸಂಘದಲ್ಲಿ ಇದೊಂದು ಐತಿಹಾಸಿಕ ಮದುವೆಯಾಗಿದೆ. ಇವರ ಮದುವೆಗೆ ಯಾವುದೇ ಕಾನೂನು ಅಡ್ಡಿಯಾಗುವುದ್ದಿಲ್ಲ. ಈ ಮದುವೆ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಸ್ಪೆಷಲ್ ಮದುವೆ ಕಾಯ್ದೆ ಅಡಿ ದಾಖಲಾಗುತ್ತದೆ ಎಂದು ವಕೀಲರಾದ ಮಾಯಾ ಕೃಷ್ಣನ್ ತಿಳಿಸಿದ್ದಾರೆ.
ನಾವು ಅವರ ತಂದೆ-ತಾಯಿ ಹಾಗಾಗಿ ನಾವು ನಮ್ಮ ಮಗನ ಮದುವೆಗೆ ಸಹಕಾರ ನೀಡುತ್ತಿದ್ದೇವೆ. ಹುಟ್ಟಿದ್ದಾಗ ಆಕೆ ಮಗಳಾಗಿ ಹುಟ್ಟಿದ್ದಳು. ಆದರೆ ಈಗ ಆಕೆ ನನ್ನ ಮಗ. ಆದರೆ ಸಂಬಂಧಿಕರು ಈ ರೀತಿ ಯೋಚಿಸುವುದಿಲ್ಲ. ಮೊದಲು ಇದು ನಮಗೆ ಬಹಳ ಕಷ್ಟವಾಗಿತ್ತು. ಈ ಮದುವೆ ನಮ್ಮ ಸಂಪ್ರದಾಯದಂತೆ ನಡಿಯಬೇಕೆಂದು ಕೇಳಿಕೊಂಡಿದ್ದೆ ಇಶಾನ್ ತಾಯಿ ಶನೀಪಾ ತಿಳಿಸಿದ್ದಾರೆ.
Ishaan K Shaan and Surya become the first transsexual couple of #Kerala, after getting married at a ceremony in Thiruvananthapuram pic.twitter.com/7tiCXj4Fw1
— ANI (@ANI) May 10, 2018