ಶೀಘ್ರವೇ ಬಸ್‌ ಪ್ರಯಾಣ ದರ ಏರಿಕೆ – ಸುಳಿವು ನೀಡಿದ ರಾಮಲಿಂಗಾ ರೆಡ್ಡಿ

Public TV
1 Min Read
Ramalinga Reddy

– ಸಾರಿಗೆ ನಿಗಮಗಳಿಗೆ 1,100 ಕೋಟಿ ರೂ. ಬಾಕಿ

ಬೆಂಗಳೂರು: ತೈಲ ಬೆಲೆ ಹೆಚ್ಚಳ ಬೆನ್ನಲ್ಲೇ ಶೀಘ್ರವೇ ಬಸ್ ಪ್ರಯಾಣ (Bus Fare Hike) ದರ ಹೆಚ್ಚಿಸುವ ಸುಳಿವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನೀಡಿದ್ದಾರೆ.

2014ರಿಂದ ಬಿಎಂಟಿಸಿ (BMTC) ನಾಲ್ಕು ವರ್ಷದಿಂದ ಕೆಎಸ್‌ಆರ್‌ಟಿಸಿ (KSRTC) ಪ್ರಯಾಣ ದರ ಹೆಚ್ಚಾಗಿಲ್ಲ. ಡೀಸೆಲ್ ದರ ಹೆಚ್ಚಳದಿಂದ ಹೆಚ್ಚು ಹೊರೆ ಆಗುತ್ತಿದೆ. ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಶಾಲಾದಲ್ಲಿ ದಲೈಲಾಮ ಭೇಟಿಯಾದ ನ್ಯಾನ್ಸಿ ಪೆಲೋಸಿ- ಕಣ್ಣು ಕೆಂಪಗಾಗಿಸಿದ ಚೀನಾ

shakti scheme free bus karnataka

ಶಕ್ತಿ ಗ್ಯಾರಂಟಿ (Shakti Scheme) ಯೋಜನೆಯ 1100 ಕೋಟಿ ರೂ. ಹಣವನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸೆಪ್ಟೆಂಬರ್ 15 ವರಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಡೆಡ್‌ಲೈನ್‌ ನೀಡಲಾಗಿದೆ. ಸೆಪ್ಟೆಂಬರ್ 15 ಬಳಿಕ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವುದಿಲ್ಲ. ಈಗಾಗಲೇ ಹಲವು ಬಾರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಮಾಡಿದ್ದೇವೆ. ಶೀಘ್ರದಲ್ಲೇ ಹೆಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ ಆದೇಶ ಹೊರಡಿಸಲಾಗುತ್ತದೆ ಎಂದರು.

 

Share This Article