ಬೆಂಗಳೂರು: ದೇಶದಲ್ಲಿ ಇಂಧನ ದರ ಏರಿಕೆ ಇಳಿಕೆ ಆಗುವಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ ಮಾಡುವ ಹೊಸ ಯೋಚನೆಯನ್ನು ಸಾರಿಗೆ ಇಲಾಖೆ ಮಾಡಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯ 5 ವರ್ಷಗಳಿಗೊಮ್ಮೆ ಪ್ರಯಾಣ ದರ ಏರಿಕೆ ಮಾಡುವ ಪದ್ಧತಿ ಇದ್ದು, ಇದರ ಬದಲು ಇಂಧನ ದರಕ್ಕೆ ಅನುಗುಣವಾಗಿ ಬಸ್ ಪ್ರಯಾಣ ದರ ನಿಗದಿ ಮಾಡುವಂತೆ ಸಿಎಂ ಕುಮಾರಸ್ವಾಮಿ ಅವರೇ ಸಲಹೆ ಕೊಟ್ಟಿದ್ದಾರೆ. ಸಿಎಂ ಕೊಟ್ಟ ದರ ಪರಿಷ್ಕರಣೆ ಸಲಹೆಯನ್ನೇ ಈಗ ಅವರಿಗೆ ಮನವಿ ರೂಪದಲ್ಲಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.
Advertisement
Advertisement
ಹಳ್ಳಿಗಳಿಗೂ ಐಷಾರಾಮಿ ಬಸ್:
ಹಳೆ ಬಸ್‍ಗಳನ್ನು ಕೊಟ್ಟು ಹೊಸ ಬಸ್‍ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದ್ದು, ಸ್ಲೀಪರ್ ಕೋಚ್, ಲಕ್ಷುರಿ ಬಸ್ ಸೇರಿ ಒಟ್ಟು 3 ಸಾವಿರ ಬಸ್ ಖರೀದಿಗೆ ನಿರ್ಧರಿಸಲಾಗಿದೆ. ಕೆಲ ಹಳ್ಳಿಗಳಲ್ಲಿನ ಜನ ನಮಗೆ ಹಳೆಯ ಬಸ್ ನೀಡುತ್ತೀರಾ ಎಂದು ಪ್ರಶ್ನೆ ಮಾಡಿದ್ದು, ಹಾಗಾಗಿ ಈಗ ಖರೀದಿ ಮಾಡುವ ಹೊಸ ಬಸ್‍ಗಳಲ್ಲಿ ಕೆಲವುಗಳನ್ನು ಹಳ್ಳಿಗಳಿಗೆ ಕಳುಹಿಸುವ ಯೋಚನೆ ಇದೆ ಎಂದು ಸಚಿವರು ತಿಳಿಸಿದರು.
Advertisement
ರಾಜ್ಯ ಸಾರಿಗೆ ಇಲಾಖೆ ನಷ್ಟದಲ್ಲಿರೋವುದು ಅಧಿಕಾರಿಗಳ ಅವ್ಯವಹಾರದಿಂದ ಹೊರತು ಕಡಿಮೆ ಆದಾಯದಿಂದಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದೇವೆ. ನಾಲ್ಕೂ ನಿಗಮಗಳಲ್ಲೂ ಅಕ್ರಮ ನಡೆಯುತ್ತಿದೆ. ಸಾರಿಗೆ ಇಲಾಖೆ ನಷ್ಟ ಅನುಭವಿಸಲು ಅಕ್ರಮಗಳೇ ಕಾರಣವಾಗಿದೆ ಎಂದು ದೂರಿದ್ದಾರೆ. ಅಲ್ಲದೇ ಯಾರೇ ಅಕ್ರಮ ಮಾಡಿದರು ಸುಮ್ಮನೇ ಬಿಡಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
Advertisement
ಜೆಡಿಎಸ್ ಪಕ್ಷದ ನಾಯಕರುಗಳಿಗೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಮಾಧಾನ ತಂದಿಲ್ಲ. ಬದಲಾಗಿ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ಹೋಗುತ್ತಿದ್ದೇವೆ ಎಂಬ ರೀತಿಯಲ್ಲಿ ಸಚಿವರು ಹೇಳಿದ್ದು. ಅಡ್ಜಸ್ಟ್ ಮೆಂಟ್ ರಾಜಕೀಯ ಇದ್ದರೆ ಮಾತ್ರಾ ಎಲ್ಲಾ ಸುಗಮವಾಗಿ ನಡೆಯುತ್ತೆ, ಸರ್ಕಾರ ನಡೆಯಬೇಕಾದರೆ ಹೊಂದಿಕೊಂಡು ಹೋಗುವುದು ಅನಿವಾರ್ಯ, ವಾಜಪೇಯಿ ಇಪ್ಪತ್ತಮೂರು ಪಕ್ಷಗಳ ಜೊತೆ ಹೊಂದಿಕೊಂಡು ಸರ್ಕಾರ ನಡೆಸಿರಲಿಲ್ವಾ. ಅಂತೆಯೇ ಸಿಎಂ ಎಚ್‍ಡಿಕೆ ಅವರು, ಹೊಂದಿಕೊಂಡು ಹೋಗಬೇಕಿದೆ ಅಷ್ಟೇ ಎಂದು ಹೇಳಿದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಏನಾದರು ಸಮಸ್ಯೆ ಆಗುತ್ತಿದ್ದೇಯಾ ಎಂಬ ಪ್ರಶ್ನೆಗೆ, ಅದನ್ನೆಲ್ಲಾ ಹೇಳೋಕೆ ಆಗಲ್ಲ ಎಂದು ಪರೋಕ್ಷವಾಗಿ ಸಮಸ್ಯೆ ಆಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv