ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ (Transport Employees) ತಿಕ್ಕಾಟ ಮತ್ತೆ ಮುಂದುವರಿದಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರೋ ಸಾರಿಗೆ ಸಂಘಟನೆಗಳು, ಮತ್ತೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಸಾರಿಗೆ ನೌಕರರು, ಕೊನೆಗೂ ಸರ್ಕಾರದ ವಿರುದ್ಧ ಸಿಡಿದೆದ್ದು ಮುಷ್ಕರಕ್ಕೆ (Strike) ಕರೆಕೊಟ್ಟಿದ್ದಾರೆ. ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಆಗಸ್ಟ್ 4 ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ಕೊಡಲಾಗಿದೆ.
ಈ ಸಂಬಂಧ ಜಂಟಿ ಕ್ರಿಯಾ ಸಮಿತಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. 36 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021ರ ಮುಷ್ಕರದ ವೇಳೆ ಸಸ್ಪೆಂಡ್ ಆದ ನೌಕರರ ಮರು ನೇಮಕಾತಿಗೆ ಒತ್ತಾಯಿಸಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಕಳೆದ ಜೂನ್ 4 ರಂದು ಸಿಎಂ ಜೊತೆ ನೌಕರ ಮುಖಂಡರ ಸಭೆ ಮಾಡಲಾಗಿತ್ತು. ಆದರೆ ಸಭೆಯಲ್ಲಿ ನೌಕರರ ಬೇಡಿಕೆಗೆ ಸಿಎಂ ಒಪ್ಪಿರಲಿಲ್ಲ. ಅಲ್ಲದೇ 36 ತಿಂಗಳ ಹಿಂಬಾಕಿ ಕೊಡೋಕೆ ಸಿಎಂ ಕೂಡ ಒಪ್ಪಲಿಲ್ಲ. ಈ ಬಗ್ಗೆ ಸಭೆಯಲ್ಲಿ ಮುಖಂಡರು ವಿರೋಧ ವ್ಯಕ್ತಪಡಿಸಿದಾಗ ಮತ್ತೆ 6 ದಿನ ಬಿಟ್ಟು ಸಭೆ ಕರೆಯೋದಾಗಿ ಸಿಎಂ ಹೇಳಿದ್ದರು. ಆದರೆ ಮಾತು ಕೊಟ್ಟು ಅನೇಕ ದಿನಗಳಾದ್ರು, ಮತ್ತೆ ಸಭೆಗೆ ಆಹ್ವಾನ ಮಾಡಿಲ್ಲ. ಇದರಿಂದ ಆಕ್ರೋಶಗೊಂಡಿರೋ ನೌಕರರ ಮುಖಂಡರು, ಆಗಸ್ಟ್ 4 ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದು, ಆ.4ರ ಒಳಗೆ ಬೇಡಿಕೆ ಈಡೇರಿಕೆ ಆದೇಶ ಹೊರಡಿಸದಿದ್ದರೆ, ಯಾವುದೇ ಹೊಂದಾಣಿಕೆ ಇಲ್ಲದೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೌಕರರ ಬೇಡಿಕೆಗಳೇನು…?
* 1-1-24ರಿಂದ ಇಲ್ಲಿವರೆಗಿನ 38 ತಿಂಗಳ ಹಿಂಬಾಕಿ (ಅರಿಯರ್ಸ್)
* ಹೊಸ ವೇತನ ಪರಿಷ್ಕರಣೆ
* 2021ರ ಮುಷ್ಕರದಲ್ಲಿ ಅಮಾನತುಗೊಂಡ ನೌಕರರ ಮರು ನೇಮಕ