ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಸಂತಸದ ಸಂಗತಿಯೊಂದನ್ನು ಹೊತ್ತು ತಂದಿದೆ. ಇಷ್ಟು ದಿನ ವಾಹನಗಳಿಗೆ ಇಷ್ಟವಾದ ನೋಂದಣಿ ಸಂಖ್ಯೆ ಅಥವಾ ತಮ್ಮ ಜನ್ಮದಿನಾಂಕದ ನಂಬರ್ ಪಡೆಯಲು ಜನರು ತಿಂಗಳಿನಿಂದ ಹಿಡಿದು ವರ್ಷಾನುಗಟ್ಟಲೆ ಕಾಯುತ್ತಿದ್ದರು. ಈಗ ತಕ್ಷಣ ಪಡೆಯವಂತಹ ಹೊಸ ಸಾಫ್ಟ್ ವೇರ್ ವೊಂದನ್ನ ಸಾರಿಗೆ ಇಲಾಖೆ ಲಾಂಚ್ ಮಾಡುತ್ತಿದೆ.
Advertisement
ಇಷ್ಟು ದಿನ ತಮಗೆ ಇಷ್ಟವಾದ ನಂಬರ್ ಪಡೆಯಲು ಜನರು ವರ್ಷಾನುಗಟ್ಟಲೆ ಕಾದು, ಆ ನಂಬರಿನ ಸೀರೀಸ್ ಬರುವ ತನಕ ವಾಹನಗಳನ್ನೇ ಖರೀದಿ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಇಂತಹ ನಂಬರ್ ಪಡೆಯಲು ಹಣವನ್ನು ಸಹ ನೀಡಬೇಕಿತ್ತು. ಆದರೆ ಇದಕ್ಕೆಲ್ಲ ಕಡಿವಾಣ ಹಾಕೋದಕ್ಕೆ ಅಂತಾನೆ ಸಾರಿಗೆ ಇಲಾಖೆ ಇನ್ನು ಕೆಲವೇ ದಿನಗಳಲ್ಲಿ ‘ವಾಹನ್ 4’ ಎಂಬ ವಿನೂತನ ವೆಬ್‍ಸೈಟ್ ಹೊರತರುತ್ತಿದೆ. ಇದರಲ್ಲಿ ಸಾರಿಗೆ ಇಲಾಖೆಯ ಜೊತೆ ವ್ಯವಹಾರ ಮಾಡುವವರು ಸಂಪೂರ್ಣವಾಗಿ ಆನ್‍ಲೈನ್ ಮುಖಾಂತರವೇ ವ್ಯವಹಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ತಮಗೆ ಇಷ್ಟವಾದ ನಂಬರನ್ನು ಸಹ ವೆಬ್‍ಸೈಟ್ ಮೂಲಕ ಲಾಕ್ ಮಾಡಿಸಿ 24 ಗಂಟೆಗಳ ಒಳಗೆ ಖರೀದಿ ಮಾಡಬಹುದು.
Advertisement
ವೆಬ್‍ಸೈಟ್‍ನ ಪ್ರಯೋಜನ
Advertisement
* ಎಲ್ಲಾ ವಾಹನಗಳ ನೋಂದಣಿ ಸೇವೆಗಳಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ.
* ಆನ್‍ಲೈನ್‍ನಲ್ಲೇ ಶುಲ್ಕ ಪಾವತಿ.
* ಅರ್ಜಿದಾರರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ.
* ರ‍್ಯಾಂಡಮ್ ಪದ್ಧತಿಯಲ್ಲಿ ವಾಹನ ನೊಂದಣಿ ಸಂಖ್ಯೆ ಹಂಚಿಕೆ.
* ವಾಹನದ ಎನ್‍ಓಸಿ ಶೀಘ್ರವಾಗಿ ನೀಡುವಿಕೆ.
* ವಾಹನಗಳ ನೊಂದಣಿಗಳ ಬಗ್ಗೆ ಎಸ್‍ಎಂಎಸ್ ಮೂಲಕ ಮಾಹಿತಿ ಪಡಯಬುದು ಎಂದು ಸಾರಿಗೆ ಇಲಾಖೆಯ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.