ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಉದ್ಘಾಟನೆಗೊಂಡಿರುವ ಸಿಗ್ನೇಚರ್ ಬ್ರಿಡ್ಜ್ ಮೇಲೆ ಮಂಗಳಮುಖಿಯರು ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳಮುಖಿಯರು ಬ್ರಿಡ್ಜ್ ಮೇಲೆ ತಮ್ಮ ಬಟ್ಟೆಯನ್ನು ಕಳಚಿ ಅಲ್ಲಿ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ. ಅಲ್ಲಿದ್ದ ಜನರು ಮಂಗಳಮುಖಿಯರ ಡ್ಯಾನ್ಸ್ ನೋಡುತ್ತಾ ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಸದ್ಯ ಮಂಗಳಮುಖಿಯರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ದೂರನ್ನು ದಾಖಲಿಸಿಕೊಂಡು ಈ ಘಟನೆ ನಡೆದಿದ್ದು ಯಾವಾಗ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Advertisement
Advertisement
ಮಂಗಳಮುಖಿಯರು ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಾಗ ಅಲ್ಲಿ ಪೊಲೀಸರು ಇರಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಜನರ ಆರೋಪಕ್ಕೆ ಪೊಲೀಸರು ಸ್ಪಂದಿಸಿ ಸಿಗ್ನೇಚರ್ ಬ್ರಿಡ್ಜ್ ಬಳಿ ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಸಿಗ್ನೇಚರ್ ಬ್ರಿಡ್ಜ್ ಉದ್ಘಾಟನೆಯ ದಿನದಿಂದ ಎಲ್ಲರ ಹ್ಯಾಂಗೌಟ್ ಸ್ಪಾಟ್ ಆಗಿದೆ. ಕೆಲವು ಜನರು ಸೇತುವೆ ಮೇಲಿನ ಬೌಂಡರಿಯನ್ನು ಹತ್ತಿ ಸೆಲ್ಫಿ ತೆಗೆಯುವ ಸಾಹಸ ಮಾಡುತ್ತಿದ್ದಾರೆ.
Advertisement
1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ ಉರುಳಿ, 22 ಮಕ್ಕಳು ಯಮುನಾ ನದಿಯಲ್ಲಿ ಕೊನೆಯುಸಿರೆಳೆದಿದ್ದರು. ಈ ದುರಂತ ನಡೆದ ಬಳಿಕ ಸರ್ಕಾರ ಬೃಹತ್ ತೂಗು ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಿತ್ತು. 2010ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಹಣಕಾಸು ತೊಂದರೆಯಿಂದ ನಿಂತು ಹೋಗಿತ್ತು. ಸುಮಾರು 1594 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯನ್ನ ಇದೇ ತಿಂಗಳ ನವೆಂಬರ್ 5ಕ್ಕೆ ಲೋಕಾರ್ಪಣೆ ಮಾಡಲಾಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews