ಚೆನ್ನೈ: ಸ್ಥಳೀಯ ಚುನಾವಣೆಗೆ ತಮಿಳುನಾಡಿನಲ್ಲಿ ಬಿಜೆಪಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದೆ.
ತಮಿಳುನಾಡಿನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಬಿಜೆಪಿ ಮತ್ತು ಎಐಎಡಿಎಂಕೆ ನಿರ್ಧರಿಸಿದೆ. ಇದೀಗ 2 ಪಕ್ಷಗಳೂ ಮತ್ತೋಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಲವು ವಾರ್ಡ್‍ಗಳಲ್ಲಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದೆ.
Advertisement
Advertisement
ರಾಜ್ಯದ 12,838 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 1,374 ನಗರಪಾಲಿಕೆ ವಾರ್ಡ್‍ಗಳು, 3,843 ಪುರಸಭೆ ವಾರ್ಡ್‍ಗಳು, 7,621 ಪಟ್ಟಣ ಪಂಚಾಯತ್ ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಸೌಥ್ ಚೆನ್ನೈನಿಂದ ಎಐಎಡಿಎಂಕೆ ಅಭ್ಯರ್ಥಿ ಎನ್,ಜಯದೇವಿ ನಾಮಿನೇಷನ್ ಸಲ್ಲಿಸಿದ್ದಾರೆ. ತಿರುವಿಕಾ ನಗರದ ವಾರ್ಡ್ ನಂಬರ್ 75ರ ಬಿಜೆಪಿ ಅಭ್ಯರ್ಥಿಯಾಗಿ ರಾಜಮ್ಮ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
Advertisement
Advertisement
ಬಿಜೆಪಿ ಅಭ್ಯರ್ಥಿ ರಾಜಮ್ಮ ಮಾತನಾಡಿ, ನನ್ನ ಸಮುದಾಯಕ್ಕೆ ನಾನು ಒಳ್ಳೆಯ ಮಾದರಿಯಾಗುತ್ತೇನೆ. ನಾನು ಆಯ್ಕೇಯಾದರೆ ಕುಡಿಯುವ ನೀರು, ಚರಂಡಿ ಸಮಸ್ಯೆ ಸೇರಿದಂತೆ ಇಂತಹ ಹಲವುಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ
ಎಐಎಡಿಎಂಕೆ ಅಭ್ಯರ್ಥಿ ತೃತೀಯಲಿಂಗಿ ಜಯದೇವಿ, ನಾನು ಆಯ್ಕೆಯಾದರೆ ನನ್ನ ವಾರ್ಡ್‍ನ್ನು ಇತರರಿಗೆ ಮಾದರಿಯಾಗುವ ರೀತಿ ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದ್ದಾರೆ.