ತಿರುವನಂತಪುರಂ: ತೃತೀಯಲಿಂಗಿಗಳನ್ನು ಪೊಲೀಸರು ವಿವಸ್ತ್ರಗೊಳಿಸಿ ಅವರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಕೇರಳದ ಅಲೆಪ್ಪಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕುಡಿದು ಮದ್ಯದ ನಶೆಯಲ್ಲಿ ತೃತೀಯಲಿಂಗಿಗಳು ಗಲಾಟೆ ಮಾಡುತ್ತಿದ್ದರು. ಅವರ ಗಲಾಟೆಯಿಂದ ನೊಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಹೀಗಾಗಿ ಪೆಟ್ರೋಲಿಂಗ್ ತಂಡ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
Advertisement
ಪೊಲೀಸ್ ಠಾಣೆಯಲ್ಲೂ ತೃತೀಯ ಲಿಂಗಿಗಳು ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಇವರು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಭಯದಿಂದ ಅಲ್ಲಿದ್ದ ಮಹಿಳಾ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಫೋಟೋ ಹಾಗೂ ವಿಡಿಯೋ ತೆಗೆದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Advertisement
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ಎ. ಸುರೇಂದ್ರ, ಗುರುವಾರ ಈ ಘಟನೆ ನಡೆದಿದ್ದು, ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾರೂ ಹಾಕಿದ್ದಾರೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎ. ಸುರೇಂದ್ರ ಹೇಳಿದ್ದಾರೆ.
Advertisement
ಪೆಟ್ರೋಲಿಂಗ್ ಪೊಲೀಸ್ ತಂಡ ತೃತೀಯ ಲಿಂಗದವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿ ಅವರನ್ನು ವಿವಸ್ತ್ರಗೊಳಿಸಿ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು ಎಂದು ತೃತೀಯ ಲಿಂಗಿಗಳು ತಿಳಿಸಿದ್ದಾರೆ.