Connect with us

ಹಣ ವಸೂಲಿ ಮಾಡುವ ವಿಚಾರಕ್ಕೆ ಕಿರಿಕ್- ಪೊಲೀಸ್ ಠಾಣೆ ಆವರಣದಲ್ಲೇ ಮಂಗಳಮುಖಿಯರ ಜಡೆಜಗಳ

ಹಣ ವಸೂಲಿ ಮಾಡುವ ವಿಚಾರಕ್ಕೆ ಕಿರಿಕ್- ಪೊಲೀಸ್ ಠಾಣೆ ಆವರಣದಲ್ಲೇ ಮಂಗಳಮುಖಿಯರ ಜಡೆಜಗಳ

ಚಿತ್ರದುರ್ಗ: ಹಣ ವಸೂಲಿ ಮಾಡುವ ವಿಚಾರಕ್ಕೆ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿತ್ರದುರ್ಗದ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ.

ಬೆಂಗಳೂರು ಹಾಗೂ ಚಾಮರಾಜನಗರ ಮೂಲದ ಮಂಗಳಮುಖಿಯರ ತಂಡ ಚಿತ್ರದುರ್ಗಕ್ಕೆ ಹೊಸದಾಗಿ ಲಗ್ಗೆ ಇಟ್ಟಿದೆ. ಆದ್ರೆ ಅವರ ವ್ಯಾಪ್ತಿ ಮೀರಿ ಹಣ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶಗೊಂಡಿರುವ ಸ್ಥಳೀಯ ಮಂಗಳಮುಖಿಯರು ಗಲಾಟೆ ಮಾಡಿದ್ದರು. ಅಲ್ಲದೇ 2-3 ಬಾರಿ ಎಚ್ಚರಿಕೆ ನೀಡಿದ್ದರು.

ಈ ವೇಳೆ ಸ್ಥಳೀಯ ಮಂಗಳಮುಖಿಯರು ಹಾಗೂ ಹೊರಗಿನವರು ಎಂಬ ಸಮಸ್ಯೆ ಉದ್ಭವವಾಗಿ ಸಮಸ್ಯೆಯ ಇತ್ಯರ್ಥಕ್ಕಾಗಿ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ರಾಜಿ ಸಂಧಾನ ಎಂದು ಮಾತನಾಡಿಕೊಂಡು ಹೊರಬಂದ ಅವರು ಮತ್ತೆ ಪರಸ್ಪರ ಜಡೆಗಳನ್ನು ಹಿಡಿದು ಬಡಾವಣೆ ಪೊಲೀಸ್ ಠಾಣೆ ಎದುರೇ ಹಿಗ್ಗಾಮುಗ್ಗಾ ಬಡಿದಾಡಿದ್ದಾರೆ.

ಠಾಣೆ ಎದುರಿನಲ್ಲೇ ನಡೆದ ಗಲಾಟೆ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

 

Advertisement
Advertisement