ಬೆಂಗಳೂರು: ಇತ್ತೀಚಿಗಷ್ಟೇ ಡಿ.ರೂಪಾ ವಿರುದ್ಧ ವರ್ತಿಕಾ ಕಟಿಯಾರ್ ಸಿಎಸ್‌ಗೆ ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ಇದೀಗ ಐಜಿಪಿ ಡಿ.ರೂಪಾರನ್ನು ಐಎಸ್‌ಡಿಯಿಂದ ವರ್ಗಾವಣೆ ಮಾಡಿದೆ.
ರಾಜ್ಯದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ಸಂಘರ್ಷ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಫ್ರೆ.೨೦ ರಂದು ವರ್ತಿಕಾ ಕಟಿಯಾರ್ ೨೦೦೦ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಡಿ.ರೂಪಾ ವಿರುದ್ಧ ಸಿಎಸ್‌ಗೆ ದೂರು ನೀಡಿದ್ದರು. ಕಳೆದ ವರ್ಷದ ಸೆ.೬ರಂದು ತಮ್ಮ ಅನುಮತಿಯಿಲ್ಲದೇ ಚೇಂಬರ್‌ನಿಂದ ಮಹತ್ವದ ಕಡತಗಳನ್ನು ಪೊಲೀಸ್ ಸಿಬ್ಬಂದಿಯಿಂದ ಡಿ. ರೂಪಾ ತರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಎರಡು ದಿನಗಳ ಹಿಂದೆಯಷ್ಟೇ ವರ್ತಿಕಾ ಕಟಿಯಾರ್‌ನ್ನು ಗೃಹರಕ್ಷಕ ಮತ್ತು ಪೌರ ರಕ್ಷಣಾ ದಳದ ಡಿಐಜಿ ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಡಿ.ರೂಪಾರನ್ನು ಐಎಸ್‌ಡಿಯಿಂದ ಕರ್ನಾಟಕ ಸಿಲ್ಕ್ ಬೋರ್ಡ್ ಎಂಡಿ ಹುದ್ದೆಗೆ ವರ್ಗ ಮಾಡಿದೆ.ಇದನ್ನೂ ಓದಿ: ಐಜಿಪಿ ರೂಪಾ ವಿರುದ್ಧ ಸಿಎಸ್‌ಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು
Advertisement
ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ಡಿ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ವರ್ತಿಕಾ ಕಟಿಯಾರ್ ಸುದ್ದಿ ಆಗಿದ್ರು. ಇತ್ತೀಚಿಗಷ್ಟೇ ಒಂದು ಹಂತ ಮುಂದೆ ಹೋಗಿ ಐಜಿಪಿ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದರು.
Advertisement
ರೂಪಾ ಅವರು ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆಗಳನ್ನು ಇರಿಸಿದ್ದಾರೆ. ಅಲ್ಲದೇ ಆ ದಾಖಲೆಗಳನ್ನು ಬಳಸಿ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಕಟಿಯಾರ್ ದೂರಿದ್ದರು.ಇದನ್ನೂ ಓದಿ: ಭಾರತಕ್ಕೂ ತೆರಿಗೆ ಶಾಕ್ – ಪ್ರತಿ ಸುಂಕದ ಘೋಷಣೆ ಮಾಡಿದ ಟ್ರಂಪ್
Advertisement
Advertisement