ಬೆಂಗಳೂರು/ಮೈಸೂರು: ಮಡಾ ಹಗರಣದ (MUDA Scam) ತನಿಖೆಯನ್ನು ಸಿಬಿಐಗೆ (CBI) ವರ್ಗಾಯಿಸುವಂತೆ ಕೋರಿ ದೂರುದಾರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರು ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಿದ್ದಾರೆ.
ಮುಂದಿನ ವಾರ ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಇಂದು ಸಿಗಲಿಲ್ಲ ದರ್ಶನ್ ಗೆ ಜಾಮೀನು: ಸೆ.30ಕ್ಕೆ ಬೇಲ್ ಭವಿಷ್ಯ
ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಮುಂದಿನ ವಾರ ನಾನು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಬಹುದು. ಇಂತಹ ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಹೀಗಾಗಿ ಸಿಎಂ ವಿರುದ್ಧದ ಪ್ರಕರಣವನ್ನ ಸಿಬಿಐ ತನಿಖೆ ಮಾಡಬೇಕು. 50 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಹಗರಣಗಳನ್ನ ಸಿಬಿಐ ತನಿಖೆ ಮಾಡಬೇಕೆಂಬ ನಿರ್ದೇಶನ ಇದೆ ಎಂದರು.
ಈ ಹೋರಾಟಕ್ಕೆ ಅನೇಕ ಸಾಮಾಜಿಕ ಕಾರ್ಯಕರ್ತರು, ಒಂದು ತಂಡ ಕೆಲಸ ಮಾಡಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ. ನಾನು ಮಾಡಿರುವ ಆರೋಪವನ್ನ ಸಾಬೀತು ಪಡಿಸುತ್ತೇನೆ ಎಂದು ತಿಳಿಸಿದರು.
ಸಿಎಂ ವಿರುದ್ಧ ಎಫ್‌ಐಆರ್ ದಾಖಲಾಗುವ ಮುನ್ನ ಮಧ್ಯಾಹ್ನ ಮಾತನಾಡಿದ್ದ ಸ್ನೇಹಮಯಿ ಕೃಷ್ಣ, ಎರಡು ದಿನ ಕಳೆದರೂ ಎಫ್‌ಐಆರ್ (FIR) ದಾಖಲಿಸಿಲ್ಲ. ಬೇಕಂತಲೇ ಲೋಕಾಯುಕ್ತ ಎಸ್ಪಿ ಎಫ್ಐಆರ್ ದಾಖಲು ಮಾಡಲು ವಿಳಂಬ ಮಾಡುತ್ತಿದ್ದಾರೆ. ಆದೇಶದಲ್ಲಿ ಸ್ಪಷ್ಟವಾಗಿ ಸಿಆರ್‌ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಎಂದು ಕೋರ್ಟ್ ಹೇಳಿದೆ. ಇದೆಲ್ಲ ಎಸ್‌ಎಸ್‌ಎಲ್‌ಸಿ ಓದಿರುವ ನನಗೆ ಅರ್ಥ ಆಗುತ್ತದೆ. ಅಧಿಕಾರಿಗೆ ಅರ್ಥ ಆಗಲ್ವಾ? ನ್ಯಾಯಾಲಯಕ್ಕಿಂತ ಇವರು ದೊಡ್ಡವರಾ ಎಂದು ಪ್ರಶ್ನಿಸಿದ್ದರು.
ಪೊಲೀಸರು ಮೊಬೈಲ್ ಹೊರಗಿಟ್ಟು ಬನ್ನಿ ಅಂತಾರೆ. ಮೊಬೈಲ್‌ಗೆ ಹೆದರಿಕೊಳ್ಳುವ ಅಧಿಕಾರಿಗೆ ಸಿಎಂ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ? ಇಂಥ ಅಧಿಕಾರಿಗೆ ದೂರು ಕೊಟ್ಟು ಪ್ರಯೋಜನ ಇಲ್ಲ. ಇಂದು ಕೂಡ ಎಫ್ಐಆರ್ ದಾಖಲು ಮಾಡದೇ ಇದ್ದರೆ ಲೋಕಾಯುಕ್ತ ಪೊಲೀಸರ ವಿರುದ್ಧವೇ ಕೇಸ್ ದಾಖಲು ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯಗೆ ಸಮಯ ಸಿಗಲಿ ಎಂಬ ಕಾರಣಕ್ಕೆ ಈ ರೀತಿಯ ನಾಟಕ ಮಾಡ್ತಿದ್ದಾರೆ. ಇಂದು ಒಂದು ದಿನ ಕಳೆದರೆ ನಾಳೆ ಮತ್ತು ನಾಳಿದ್ದು ರಜೆ ಇದೆ. ಈ ಮೂಲಕ ಸಿಎಂ ಸಮಯಾವಕಾಶ ಕೊಡಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದ್ದರು.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಅನ್ವಯ ಇಂದು ಮೈಸೂರು ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.