ನವದೆಹಲಿ: ಶೀಘ್ರದಲ್ಲಿಯೇ ಪ್ರಯಾಣಿಕರಿಗೆ ಶತಾಬ್ದಿ, ಇಂಟರ್ ಸಿಟಿ, ತೇಜಸ್, ಡಬಲ್ ಡೆಕ್ಕರ್ ರೈಲುಗಳಲ್ಲಿ ಟಿಕೆಟ್ ಮೇಲೆ ಶೇ.25ರಷ್ಟು ರಿಯಾಯ್ತಿ ಸಿಗಲಿದೆ. ಖಾಲಿ ಸೀಟುಗಳಿಂದ ಇಲಾಖೆಗೆ ಆಗುತ್ತಿರುವ ನಷ್ಟ ತುಂಬಲು ರಿಯಾಯ್ತಿ ನೀಡಲು ಭಾರತೀಯ ರೈಲ್ವೇ ಮುಂದಾಗಿದೆ. ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಸೀಟ್ ಗಳ ಮೇಲೆ ಶೇ.25 ಡಿಸ್ಕೌಂಟ್ ಲಭ್ಯವಾಗಲಿದೆ.
ಭರ್ತಿಯಾಗದೇ ಸಂಚರಿಸುತ್ತಿರುವ ರೈಲುಗಳ ಟಿಕೆಟ್ ಮೇಲೆ ಪ್ರಯಾಣಿಕರಿಗೆ ಈ ವಿಶೇಷ ರಿಯಾಯ್ತಿ ಸಿಗಲಿದೆ. ರಿಯಾಯ್ತಿ ನಿರ್ಧಾರವನ್ನು ಆಯಾ ರೈಲ್ವೇ ವಲಯದ ಚೀಫ್ ಕರ್ಮಷಿಯಲ್ ಮ್ಯಾನೇಜರ್ ಅವರಿಗೆ ನೀಡಲಾಗಿದೆ.
Advertisement
Advertisement
ಪ್ರಯಾಣಿಕರಿಂದ ಭರ್ತಿಯಾಗದೇ ಸಂಚರಿಸುವ ರೈಲುಗಳ ಮಾಹಿತಿಯನ್ನು ಸೆಪ್ಟೆಂಬರ್ 30ರೊಳಗೆ ನೀಡಬೇಕೆಂದು ರೈಲ್ವೇ ಇಲಾಖೆ ಎಲ್ಲ ವಲಯಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. ಟಿಕೆಟ್ ಮೂಲ ಬೆಲೆಯಲ್ಲಿ ರಿಯಾಯ್ತಿ ಸಿಗಲಿದ್ದು, ಪ್ರಯಾಣಿಕರು ಜಿಎಸ್‍ಟಿ, ರಿರ್ಸವೇಶನ್ ಶುಲ್ಕ, ಸೂಪರ್ ಫಾಸ್ಟ್ ಟ್ಯಾರಿಫ್ ಮತ್ತು ಬಳಕೆದಾರರ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು ರೈಲ್ವೇ ಬೋರ್ಡ್ ತಿಳಿಸಿದೆ. ಸುತ್ತೋಲೆಯ ಪ್ರಕಾರ ಕಳೆದ ವರ್ಷ ಶೇ.50 ರಷ್ಟು ಕಡಿಮೆಯಾಗಿ ಭರ್ತಿಯಾಗಿ ಸಂಚರಿಸಿದ ರೈಲುಗಳಿಗೆ ಮಾತ್ರ ಈ ರಿಯಾಯ್ತಿ ಅನ್ವಯವಾಗಲಿದೆ.
Advertisement
ಸೆಪ್ಟೆಂಬರ್ 30ರೊಳಗೆ ಎಲ್ಲ ವಲಯದ ಅಧಿಕಾರಿಗಳಿಗೆ ರೈಲುಗಳ ಮಾಹಿತಿ ನೀಡಲು ತಿಳಿಸಲಾಗಿದೆ. ಹಾಗೆಯೇ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಇನ್ನು ಡಿಸ್ಕೌಂಟ್ ಯಾವಾಗ ನೀಡಬೇಕು, ಯಾವ ರೈಲುಗಳಿಗೆ ನೀಡಬೇಕು ಸೇರಿದಂತೆ ನಿರ್ಧಾರಗಳನ್ನು ಆಯಾ ವಲಯದ ಅಧಿಕಾರಿಗಳು ತೆಗೆದುಕೊಳ್ಳಲು ಸಂಪೂರ್ಣ ಸ್ವತಂತ್ರರಾಗಿರುತ್ತಾರೆ.
Advertisement
ಒಂದು ಸಾರಿ ಪ್ರಯಾಣಿಕರು ಈ ಡಿಸ್ಕೌಂಟ್ ಲಾಭ ಪಡೆದ್ರೆ ಬೇರೆ ರಿಯಾಯ್ತಿಗಳು ಲಭ್ಯವಾಗಲ್ಲ. ಉದಾಹರಣೆಗೆ ಶತಾಬ್ದಿಯಲ್ಲಿ ಗ್ರೆಡೆಡ್ ಡಿಸ್ಕೌಂಟ್, ಫೆಕ್ಸಿ ರಿಯಾಯ್ತಿಗಳು ಏಕಕಾಲದಲ್ಲಿ ಸಿಗಲ್ಲ. ಈ ಯೋಜನೆ ಜಾರಿಯಾದ ನಾಲ್ಕು ತಿಂಗಳ ನಂತರ ಎಲ್ಲ ವಲಯಗಳು ಸಂಪೂರ್ಣ ವರದಿ ರೈಲ್ವೇ ಬೋರ್ಡಿಗೆ ಸಲ್ಲಿಸಲು ಸೂಚಿಸಲಾಗಿದೆ.