ಕಲಬುರಗಿ: ತರಬೇತಿ ನೀಡುತ್ತಿದ್ದ ವಿಮಾನವೊಂದು (Training Aircraft) ಹಾರಾಟದ ವೇಳೆ ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ಪೈಲಟ್ ರೈತರ ಜಮೀನಿನಲ್ಲಿ ತುರ್ತು ಭೂಸ್ಪರ್ಷ (Emergency Landing) ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೇಟ್ ಸೀರೂರ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಕಲಬುರಗಿ ವಿಮಾನ ನಿಲ್ದಾಣದ ಟ್ರೈನಿಂಗ್ ವಿಮಾನ ಹಾರಾಟ ಪ್ರಾರಂಭಿಸಿದ ನಂತರ ಅದರ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನೂ ಓದಿ: 16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್
ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿಮೀ ಹಾರಾಟದ ಬಳಿಕ ವಿಮಾನದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆ ಪೈಲಟ್ ತಕ್ಷಣವೇ ಹತ್ತಿರದ ಜಮೀನಿನಲ್ಲಿ ಲ್ಯಾಂಡ್ ಮಾಡಿದ್ದಾರೆ. ಅದೃಷ್ಟವಶಾತ್ ಪೈಲಟ್ ಹಾಗೂ ಟ್ರೈನಿ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ʻಟಗರು ಪಲ್ಯʼ ಚಿತ್ರದಲ್ಲಿ ನಟಿಸಿದ 7 ಸ್ಟಾರ್ ಸುಲ್ತಾನ್ ಕುರ್ಬಾನಿಗೆ ಭಾರೀ ವಿರೋಧ