ಬೆಂಗಳೂರು: ಸಿಸಿಬಿಯಿಂದ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಯಲಾಗಿವೆ.
ಇತ್ತೀಚೆಗೆಷ್ಟೇ ಬೆಂಗಳೂರಿನಲ್ಲಿ ಅಲ್‌ಖೈದಾ ಉಗ್ರ ಸಂಘಟನೆಗಳ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ಕುರಿತು ತನಿಖೆ ನಡೆಯುತ್ತಿದ್ದ ವೇಳೆ ಶಂಕಿತರು ಸ್ಫೋಟಕ ಮಾಹಿತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ
- Advertisement -
- Advertisement -
ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ: 2015ರಲ್ಲಿ ಅಲ್ ಖೈದಾ ತನ್ನ ಅಂತಿಮ ಬ್ಯಾಚ್‌ಗೆ ತರಬೇತಿ ನೀಡಿತ್ತು. ನಂತರ ಅಲ್‌ಖೈದಾ ಹೊಸ ಬ್ಯಾಚ್‌ಗೆ ಟ್ರೈನಿಂಗ್ ನೀಡಲು ಹುಟುಕಾಟ ನಡೆಸಿತ್ತು. ಇದೇ ವೇಳೆ ಸಂಘಟನೆಯ ಹೆಡ್ಲರ್‌ಗಳು ಅಖ್ತರ್ ಹುಸೇನ್ ಅನ್ನು ಸಂಪರ್ಕಿಸಿದ್ದರು. ಇವನಿಗೆ ಅಲ್‌ಖೈದಾ ಸಂಘಟನೆಗೆ ಹುಡುಗರನ್ನ ಸೇರಿಸುವಂತೆ ಸೂಚನೆ ನೀಡಿದ್ದರು. ಅದಕ್ಕಾಗಿ ಕಾಶ್ಮೀರದಲ್ಲಿ ಕೋಮು ಗಲಭೆ ನಡೆಸಿ ಅಲ್ಲಿಂದ ಅಫ್ಘಾನಿಸ್ತಾನಕ್ಕೆ ತೆರಳಲು ಪ್ಲಾನ್ ಮಾಡಿದ್ದರು. ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆಗಳಿಂದ ತರಬೇತಿ ಪಡೆಯಲೂ ಯೋಜನೆ ರೂಪಿಸಿದ್ದರು.
- Advertisement -
- Advertisement -
ಉಗ್ರ ಸಂಘಟನೆಗಳಿಂದ ತರಬೇತಿ ಪಡೆದು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬೆಂಗಳೂರಿನಲ್ಲಿ ಗೇಮ್ ಪ್ಲ್ಯಾನ್ ಮಾಡಿಕೊಂಡಿದ್ದರು. ಇದಕ್ಕಾಗಿ ಅಖ್ತರ್ ಹುಸೇನ್ ಲಸ್ಕರ್ ಹಾಗೂ ಎಂ.ಡಿ ಹುಸೇನ್ ಹೆಸರಿನಲ್ಲಿ ಎರಡು ಫೇಸ್‌ಬುಕ್ ನಕಲಿ ಖಾತೆಗಳನ್ನು ಓಪನ್ ಮಾಡಿದ್ದರು. ಇದನ್ನೂ ಓದಿ: ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ತಾಯಿ
ಅಖ್ತರ್ ಎಂ.ಡಿ.ಹುಸೇನ್ ಹೆಸರಿನ ಖಾತೆ ಮೂಲಕ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಪ್ರಚೋದನೆ ನೀಡುವ ಪೋಸ್ಟ್ಗಳನ್ನು ಹಾಕುತ್ತಿದ್ದನು. ಜೊತೆಗೆ ಅಲ್‌ಖೈದಾ ಉಗ್ರ ಸಂಘಟನೆಯ ಪ್ರಚೋದನಕಾರಿ ಹೇಳಿಕೆಗಳ ವೀಡಿಯೋ, ಉಗ್ರರ ಫೋಟೋಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ವೀಡಿಯೋಗಳನ್ನ ಅಪ್ಲೋಡ್ ಮಾಡುತ್ತಿದ್ದ.
ಇತ್ತೀಚೆಗೆ ಕಾಶ್ಮೀರದಲ್ಲಿ ಮುಸ್ಲಿಮರ ಮುಂದೆ ರೂಟ್ ಮಾರ್ಚ್ ಮಾಡುವ ಫೋಟೋ ಸಹ ಅಪ್ಲೋಡ್ ಮಾಡಿ ಪ್ರಚೋದನೆ ನೀಡಿದ್ದ. ಈ ವೇಳೆ ಅಲ್ ಖೈದಾ ಹ್ಯಾಂಡ್ಲರ್‌ಗಳ ಸಂಪರ್ಕ ಹೆಚ್ಚಾಗಿದೆ ಎಂದು ಸಿಸಿಬಿ ವಿಚಾರಣೆ ವೇಳೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.