ಹೈದರಾಬಾದ್: ತೆಲಂಗಾಣದಲ್ಲಿ ತರಬೇತಿನಿರತ ವಿಮಾನವೊಂದು ಪತನಗೊಂಡಿದೆ. ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ್ದು, ಮಹಿಳಾ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ.
ಮೃತದುರ್ದೈವಿಯನ್ನು ತಮಿಳುನಾಡು ಮೂಲದ ಜಿ.ಮಹಿಮಾ(28) ಎಂದು ಗುರುತಿಸಲಾಗಿದೆ. ವಿಮಾನ – ಫ್ಲೈಟೆಕ್ ಏವಿಯೇಷನ್ ಸೆಸ್ನಾ 152 – ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೆರ್ಲಾದಿಂದ ಟೆಕ್ ಆಫ್ ಆಗಿತ್ತು. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿ ಕೇಂದ್ರಕ್ಕೆ ರಾಗಾ ಮನವಿ
Advertisement
Trainer aircraft crashes in Telangana’s Nalgonda, pilot dead https://t.co/1lk5SmSr6c Trainer aircraft crashes in Telangana’s Nalgonda, pilot dead pic.twitter.com/nyVhbIBVx6
— Vishal verma (@Vishalverma111) February 26, 2022
Advertisement
ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿ ಹಾರುತ್ತಿದ್ದ ವಿಮಾನ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೆದ್ದಪುರ ಮಂಡಲ, ತುಂಗತ್ತುರಿ ಗ್ರಾಮದ ಕೃಷಿ ಕ್ಷೇತ್ರದಲ್ಲಿ ನೆಲಕ್ಕೆ ಅಪ್ಪಳಿಸುವ ಮುನ್ನವೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ. ವಿಮಾನ ಕೆಳಕ್ಕೆ ಬಿದ್ದ ಶಬ್ದ ಕೇಳಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತರು ಬೆಚ್ಚಿ ಬಿದ್ದಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ವಿಮಾನ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ನೋಡಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.
Advertisement
ವಿಮಾನವು ಫ್ಲೈಟೆಕ್ ಏವಿಯೇಷನ್ ಅಕಾಡೆಮಿ ಎಂಬ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ್ದು, ಮಹಿಮಾ ಈ ಸಂಸ್ಥೆಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧದಲ್ಲಿ ಮೋದಿ ಮಧ್ಯಸ್ಥಿಕೆಯನ್ನ ಎಲ್ಲರೂ ಬಯಸುತ್ತಿದ್ದಾರೆ: ಹೇಮಾಮಾಲಿನಿ