ಬೆಂಗಳೂರು: ನಗರದಲ್ಲಿ ರೈಲ್ವೇ (Train) ಹಳಿಯ ಕಂಬಿಗಳನ್ನು ರಾತ್ರಿ ವೇಳೆಯಲ್ಲಿ ಕದ್ದು ಮಾರಾಟ ಮಾಡುತ್ತಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಕಾರ್ ಮಿಲರಾಮ್ ರೈಲ್ವೇ ನಿಲ್ದಾಣದಿಂದ ಕೊಡತಿಗೇಟ್ ಬಳಿ ಹಳಿಯ ಕಂಬಿಗಳನ್ನು ಸಾಗಾಟ ಮಾಡುತ್ತಿದ್ದ ಐಷರ್ ಗೂಡ್ಸ್ ವಾಹನವನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಖುಷ್ಬು ಉಡುಪಿ ಭೇಟಿ ವೇಳೆ ಆಸ್ಕರ್ ಫರ್ನಾಂಡಿಸ್ ಸಂಬಂಧಿಗೆ ಏನು ಕೆಲಸ? – ಬಿಜೆಪಿ ಪ್ರಶ್ನೆ
ಸ್ಥಳೀಯ ಯುವಕರ ತಂಡದಿಂದ ರೈಲ್ವೇ ಕಂಬಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ವಶಕ್ಕೆ ಪಡೆದ ವಾಹನದ ಮಾಲೀಕ ಪೆರಿಯಣ್ಣನ್ ಎಂಬುದಾಗಿ ತಿಳಿದು ಬಂದಿದೆ. ವಾಹನವನ್ನು ತಡೆದಾಗ ಸೂಕ್ತ ದಾಖಲೆಯನ್ನು ತೋರಿಸದ ಹಿನ್ನೆಲೆಯಲ್ಲಿ ತಂಡದ ಮೇಲೆ ಅನುಮಾನ ಮೂಡಿದೆ. ಇದರಿಂದಾಗಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ (Bengaluru) ತಮಿಳುನಾಡಿಗೆ ಹೊಸ ರೈಲ್ವೇ ಹಳಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕಂಬಿಗಳನ್ನು ಕೊಡತಿಗೇಟ್ ಬಳಿಯ ಗುಜರಿ ಗೋದಾಮಿಗೆ ಸಾಗಾಟ ಮಾಡಲಾಗುತ್ತಿತ್ತು. ಬಳಿಕ ಅಲ್ಲಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಾಗಾಟ ಮಾಡಲು ಯೋಜಿಸಲಾಗಿತ್ತು. ವಾಹನದಲ್ಲಿ ಪತ್ತೆಯಾದ ಕಂಬಿಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಲಾಗಿತ್ತು.
ಘಟನಾ ಸ್ಥಳಕ್ಕೆ ವರ್ತೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯದಲ್ಲಿ ಹಲವರು ಕೈವಾಡ ಇರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Udupi College Video Row – ತನಿಖೆ ಶುರು ಮಾಡಿದ ಕುಂದಾಪುರ ಡಿವೈಎಸ್ಪಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]