ಮುಂಬೈ: 40 ವರ್ಷದ ವಯಸ್ಸಿನ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ)ನ ವಿರುದ್ಧ ಕೇಸ್ ದಾಖಲಾಗಿದೆ.
ಟಿಕೆಟ್ ಪರೀಕ್ಷಕನನ್ನು ಹರೀಸಿಂಗ್ ಮೀನಾ ಎಂದು ಗುರುತಿಸಲಾಗಿದೆ. ಈತ ಮಹಿಳೆಯ ಮುಂದೆ ಹೋಗಿ ಕುಳಿತುಕೊಂಡು ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಸಂತ್ರಸ್ತೆಯ ತಂದೆ ಸಿಯಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೀಗಾಗಿ ಅವರನ್ನು ನೋಡಲು ಚೆನ್ನೈ ಎಕ್ಸ್ ಪ್ರೆಸ್ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದರು ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
Advertisement
Advertisement
ರೈಲು ಪುಣೆ ಮತ್ತು ಲೋನಾವಾಲಾ ಮಧ್ಯೆ ಬಂದಾಗ ಆರೋಪಿ ಹರೀಸಿಂಗ್ ಮೀನಾ ಮಹಿಳೆಯ ಬಳಿ ಟಿಕೆಟ್ ಕೇಳಿದ್ದಾನೆ. ಮಹಿಳೆ ಟಿಕೆಟ್ ತೋರಿಸಿದ್ದಾರೆ. ಆದರೆ ಆತ ಟಿಕೆಟ್ ಪರಿಶೀಲನೆ ಮಾಡುವಾಗ ಮಹಿಳೆಯನ್ನು ಅಸಭ್ಯವಾಗಿ ನೋಡಿದ್ದಾನೆ. ಇದನ್ನು ಗಮನಿಸಿದ ಆಕೆ ಆತನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ನಂತರ ಆತ ಅಲ್ಲಿಂದ ಹೋಗಿದ್ದಾನೆ.
Advertisement
ಸ್ವಲ್ಪ ಸಮಯದ ನಂತರ ಅವನು ಹರೀಸಿಂಗ್ ಮೀನಾ ಹಿಂದಿರುಗಿ ಬಂದು ನನ್ನ ಮುಂದಿನ ಬರ್ತ್ ನಲ್ಲಿ ಕುಳಿತುಕೊಂಡನು. ನಾನು ತಕ್ಷಣ ಗಾಬರಿಯಾದೆ. ಬಳಿಕ ಆತ ನನ್ನನ್ನೇ ನೋಡುತ್ತಾ ತನ್ನ ಪ್ಯಾಂಟ್ ಜಿಪ್ ತೆಗೆದುಮ ಶರ್ಟಿನ ಎರಡು ಬಟನ್ ತೆಗೆದಿದ್ದಾನೆ. ಆ ಬರ್ತ್ ನಲ್ಲಿ ನಾನೊಬ್ಬಳೆ ಕುಳಿತಿದ್ದೆ. ನಂತರ ನಾನು ತುಂಬಾ ಹೆದರಿಕೊಂಡಿದ್ದೆ. ಆದರೆ ಆತ ಅಲ್ಲಿಂದ ಎದ್ದು ಹೋಗಿರಲಿಲ್ಲ. ಸ್ವಲ್ಪ ಸಮಯದ ನಂತರ ಎದ್ದು ಹೋದನು ಎಂದು ಸಂತ್ರಸ್ತೆ ಹೇಳಿದ್ದಾರೆ.
Advertisement
ಸಂತ್ರಸ್ತೆಯ ಸಂಬಂಧಿ ಅಲ್ಲಿಗೆ ಬಂದಿದ್ದಾರೆ. ಆಗ ಮಹಿಳೆ ಅಳುತ್ತಿದ್ದರು. ಇದರಿಂದ ಭಯಗೊಂಡು ಸಂಬಂಧಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ರೈಲಿನಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್ಸ್ಟೇಬಲ್ ಧನಂಜಯ್ ಯಾದವ್ ಅವರು ಮಹಿಳೆ ಅಳುವುದನ್ನು ಗಮನಿಸಿದ್ದು, ತಕ್ಷಣ ಹೆಡ್ ಕಾನ್ಸ್ಟೇಬಲ್ ಎಸ್.ಕೆ.ಯಾದವ್ ಅವರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ನಾನು ಮಹಿಳಾ ನೆರವಿಗೆ ಬಂದೆ. ಆಗ ಮುಹಿಳೆ ನಡೆದ ವಿಚಾರವನ್ನು ವಿವರಿಸಿದರು. ಟಿಕೆಟ್ ಪರೀಕ್ಷಕನನ್ನು ಹರೀಸಿಂಗ್ ಮೀನಾ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಸನ್ 509 (ಮಹಿಳೆಯೊಬ್ಬರಿಗೆ ಅವಮಾನ ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಎಸ್.ಕೆ.ಯಾದವ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv