ಲಂಡನ್: ಭಾರಿ ಬಿಸಿಲು ಮತ್ತು ಬಿಸಿಗಾಳಿ ಬ್ರಿಟನ್ ಜನತೆಯನ್ನು ಕಂಗೆಡಿಸಿದೆ. ತೀವ್ರ ತಾಪಮಾನದಿಂದಾಗಿ ರೈಲ್ವೆಯ ಸಿಗ್ನಲ್ ಉಪಕರಣಗಳು ಕರಗಿದ್ದು, ರೈಲು ಸೇವೆಗೆ ದೊಡ್ಡ ಅಡೆತಡೆ ಎದುರಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು.
ತಾಪಮಾನ ಹೆಚ್ಚಳದಿಂದಾಗಿ ಅರಣ್ಯ, ಕಟ್ಟಡಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿವೆ. ಸಿಗ್ನಲ್ ಲೈಟ್‌ಗಳು ಕರಗುತ್ತಿವೆ. ಉಷ್ಣಾಂಶವನ್ನು ತಾಳಲಾರದೇ ಜನ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಒಂದೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಲಂಕಾ ಮಹಿಳೆಯರು
Advertisement
Advertisement
ದಾಖಲೆಯ ತಾಪಮಾನವು ಯಾವ ಹಾನಿಯನ್ನುಂಟು ಮಾಡಿದೆ ಎಂಬುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Advertisement
ನಗರದಲ್ಲಿ ಬಿಸಿಲಿನ ತಾಪಮಾನಕ್ಕೆ ಬೆಂಕಿ ಹೊತ್ತಿ ಉರಿಯುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆ
Advertisement
ರೈಲು ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು “ನಿಲ್ದಾಣಕ್ಕೆ ಬರಬೇಡಿ” ಎಂದು ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅನಗತ್ಯ ಪ್ರಯಾಣ ಮಾಡದಂತೆ ಜನರಿಗೆ ಸೂಚಿಸಲಾಗಿದೆ.
ಬ್ರಿಟನ್‌ನಲ್ಲಿ ತಾಪಮಾನ ದಿನೇ ದಿನೆ ಹೆಚ್ಚುತ್ತಿದ್ದು, 40ರಿಂದ 41 ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗಲಿದೆ ಎಂದು ಬ್ರಿಟನ್ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.