ಬೆಂಗಳೂರು: ರೈಲು ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೊರೊನಾ ಕಾಲದಲ್ಲಿ ಸಂಚರಿಸುತ್ತಿದ್ದ ರೈಲುಗಳ ದರ ಏರಿಕೆ ಮಾಡಿದ್ದ ರೈಲ್ವೇ ಇಲಾಖೆ, ವಿಶೇಷ ದರ ಕಡಿತಗೊಳಿಸಿ, ಕೊರೊನಾ ಮೊದಲು ಇದ್ದ ದರ ನಿಗದಿಗೆ ನಿರ್ಧರಿಸಿದೆ.
Advertisement
ರೈಲುಗಳ ವಿಶೇಷ ದರ ಕಡಿಗೊಳಿಸುವಂತೆ ರೈಲ್ವೇ ಮಂಡಳಿ ನವೆಂಬರ್ 12 ರಂದು ದೇಶದ ಎಲ್ಲ ರೈಲ್ವೇ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ. ಕೊರೊನಾ ವೇಳೆ ಕೆಲ ರೈಲುಗಳಿಗೆ ನೀಡಲಾಗಿದ್ದ ವಿಶೇಷ ದರ್ಜೆಯನ್ನು ಹಿಂಪಡೆದು ಮೊದಲಿನ ದರ ನಿಗದಿ ಮಾಡಲು ಸೂಚನೆ ನೀಡಿದ್ದು, ನವೆಂಬರ್ 18 ರಿಂದ ಹಳೆ ದರ ಜಾರಿಗೆ ಬರಲಿದೆ. ಇದನ್ನೂ ಓದಿ: ಹವಾಮಾನ ವರದಿ ನೀಡಲು ಸಮುದ್ರದ ನೀರಿನಲ್ಲಿ ನಿಂತ ಸಚಿವ
Advertisement
Advertisement
ಕೊರೊನಾ ಕಾಲದಲ್ಲಿ ರೈಲು ಸೇವೆ ನಿಂತಿತ್ತು. ಬಳಿಕ ರೈಲು ಸೇವೆ ಆರಂಭ ಮಾಡಲಾಗಿತ್ತು. ಆದರೆ ಸಾಮಾನ್ಯ ಟಿಕೆಟ್ ದರಕ್ಕಿಂತ ಶೇ.30 ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಿದ್ದರು. ಇದೀಗ ರೈಲ್ವೇ ಇಲಾಖೆ ವಿಶೇಷ ರೈಲುಗಳ ಟ್ಯಾಗ್‍ನ್ನು ಹಿಂಪಡೆದಿದ್ದರಿಂದ ಮೊದಲ ದರದಲ್ಲೇ ಪ್ರಯಾಣ ಬೆಳೆಸಬಹುದಾಗಿದೆ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ
Advertisement