ಹಾಸನ: ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಗಂಡು ಚಿರತೆಯೊಂದು ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಸಮೀಪದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು-ಮಂಗಳೂರು ಮಾರ್ಗದ ರೈಲಿಗೆ ಸಿಲುಕಿ ಚಿರತೆ ಮೃತಪಟ್ಟಿದೆ. ರೈಲ್ವೆ ಹಳಿ ಪರೀಕ್ಷೆ ವೇಳೆ ಚಿರತೆಯ ಮೃತ ದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯು ಮೂರು ವರ್ಷದ್ದಾಗಿದೆ ಎಂದು ತಿಳಿಸಿದ್ದಾರೆ.
Advertisement
ಜೂನ್ 3 ರಂದು ಶಿರಾಡಿಘಾಟ್‍ನ ಎಡಕುಮರಿ ಸಮೀಪದಲ್ಲಿ ಮಂಗಳೂರು-ಬೆಂಗಳೂರು ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆ ಮತ್ತು ಮರಿ ಆನೆ ಮೃತಪಟ್ಟಿದ್ದವು. ರೈಲು ಮಾರ್ಗವು ಕಾಡಿನ ಮಧ್ಯದಲ್ಲಿಯೇ ಹಾದು ಹೋಗಿದ್ದು, ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯದಲ್ಲಿರುವ ಎಡಕುಮರಿ ಸಮೀಪದಲ್ಲಿ ಈ ಘಟನೆ ನಡೆದಿತ್ತು. ತಾಯಿ ಆನೆ ಹಾಗೂ ಅದರ ಮರಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿದ್ದವು.