ಮೆಕ್ಸಿಕೋ ಸಿಟಿ: ಇಂಧನ ಟ್ಯಾಂಕರ್‌ಗೆ (Fuel Tanker) ರೈಲು (Train) ಡಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ (Fire) ಅವಘಡ ಉಂಟಾಗಿದ್ದು, ಸ್ಥಳೀಯ ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮಧ್ಯ ಮೆಕ್ಸಿಕೋದಲ್ಲಿ (Mexico) ಗುರುವಾರ ನಡೆದಿದೆ.
ಘಟನೆಯ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸರಕು ರೈಲೊಂದು ಸುತ್ತಲೂ ಬೆಂಕಿಯಿಂದ ಆವರಿಸಿರುವ ರೈಲ್ವೇ ಹಳಿಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಭಾರೀ ಬೆಂಕಿಗೆ ದಿಗ್ಭ್ರಮೆಗೊಂಡ ಸ್ಥಳೀಯರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಇಂಧನ ತುಂಬಿದ್ದ ಟ್ಯಾಂಕರ್ ಅನ್ನು ಚಲಾಯಿಸುತ್ತಿದ್ದ ಚಾಲಕ ರೈಲ್ವೇ ಹಳಿಯನ್ನು ದಾಟಲು ಪ್ರಯತ್ನಿಸುತ್ತಿದ್ದ. ಇದೇ ವೇಳೆ ಸರಕು ರೈಲು ಆಗಮಿಸಿದೆ. ಟ್ಯಾಂಕರ್ ಚಾಲಕ ಪ್ರಾಣ ಉಳಿಸಿಕೊಳ್ಳಲು ವಾಹನವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ವೇಗವಾಗಿ ಬಂದ ರೈಲು ಇಂಧನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾರೀ ಬೆಂಕಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ಇನ್ನೂ ಮುಗಿಯದ ಸುರತ್ಕಲ್ ಟೋಲ್‍ಗೇಟ್ ವಿವಾದ- ಹೋರಾಟಗಾರರ ಮೇಲೆ ಎಫ್‍ಐಆರ್
Advertisement
#ÚLTIMAHORA | En la capital de #Aguascalientes, se acaba de dar un choque de una unidad que transportaba material flamable con un tren, sobre la avenida Aguascalientes; al menos dos mil personas fueron evacuadas pic.twitter.com/StXZACbE0j
— Azucena Uresti (@azucenau) October 21, 2022
Advertisement
ಘಟನೆಯಿಂದ ಉಂಟಾದ ಬೆಂಕಿ ಸ್ಥಳೀಯ ವಸತಿ ಪ್ರದೇಶಕ್ಕೆ ತಗುಲಿದೆ. ಹಲವು ಮನೆಗಳು ಸುಟ್ಟು ಕರಕಲಾಗಿದ್ದು, 800 ರಿಂದ 1,000 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಒಬ್ಬ ಸ್ಥಳೀಯನಿಗೆ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪೀಠೋಪಕರಣ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ