ನವದೆಹಲಿ: ಉತ್ತರ ಪ್ರದೇಶದಲ್ಲಿ (Uttar Pradesh) ರೈಲು ಹಳಿಗಳ ಮೇಲೆ 6 ಕೆಜಿ ತೂಕದ ಮರದ ತುಂಡುಗಳನ್ನು ಇರಿಸಿ ರೈಲು (Train) ಹಳಿ ತಪ್ಪಿಸುವ ಯತ್ನ ನಡೆದಿದೆ.
ದೆಹಲಿ (Delhi) ಮತ್ತು ಲಖನೌ ನಡುವೆ ಬರೇಲಿ-ವಾರಣಾಸಿ ಎಕ್ಸ್‌ಪ್ರೆಸ್ ರೈಲು ಸಾಗುವ ಹಳಿಯ ಮೇಲೆ ಸುಮಾರು 6 ಕೆಜಿಗೂ ಹೆಚ್ಚು ತೂಕದ ಎರಡು ಅಡಿ ಉದ್ದದ ಮರದ ತುಂಡುಗಳು ಕಂಡುಬಂದಿದೆ. ರೈಲು ಅದಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಮರದ ತುಂಡುಗಳು ಲೋಹದ ಚಕ್ರಗಳ ಅಡಿಯಲ್ಲಿ ಸಿಕ್ಕಿಕೊಂಡಿದೆ. ಲೋಕೋ ಪೈಲಟ್ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣಾ ಅಖಾಡಕ್ಕೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್?
Advertisement
Advertisement
ಈ ಘಟನೆಯು ಹಳಿಗಳ ಮೇಲಿನ ಸಿಗ್ನಲಿಂಗ್ ಸಾಧನವನ್ನು ಹಾನಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲಿಹಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್‌ನ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಏರ್‌ಸ್ಟೈಕ್
Advertisement
ಘಟನೆಯಲ್ಲಿ ಹತ್ತಿರದ ರೈಲು ನಿಲ್ದಾಣವು ಸ್ಟೇಷನ್ ಮಾಸ್ಟರ್‌ಗಳಿಗೆ ಎಚ್ಚರಿಕೆಯನ್ನು ನೀಡಿದ್ದು, ತಪಾಸಣಾ ತಂಡ ಮತ್ತು ಲೋಕೋ ಪೈಲಟ್ ಕಷ್ಟಪಟ್ಟು ಮರವನ್ನು ಹೊರತೆಗೆದರು. ಇದರಿಂದಾಗಿ ಎರಡು ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಹತ್ಯೆಗೈದ ಪತಿ
Advertisement
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಕಳೆದ ತಿಂಗಳು ರೈಲ್ವೇ ಆಡಳಿತವು ಸಂಭಾವ್ಯ ರೈಲು ವಿಧ್ವಂಸಕ ಯತ್ನಗಳ ವಿರುದ್ಧ ಜಾಗರೂಕವಾಗಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಎನ್‌ಐಎ ಮತ್ತು ಪೊಲೀಸರು ಸೇರಿದಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಯರ ಮಠಕ್ಕೆ 31 ದಿನದಲ್ಲಿ 3.38 ಕೋಟಿ ರೂ. ಕಾಣಿಕೆ