ಬೆಂಗಳೂರು: ಬಿಎಂಟಿಸಿ ಚಾಲಕರಿಗೆ (BMTC Drivers) ಡ್ರೈವಿಂಗ್ ಬಗ್ಗೆ ಸರಿಯಾಗಿ ತರಬೇತಿ ಕೊಡಿ ಅಂತ ಸಾರ್ವಜನಿಕರು ಬಿಎಂಟಿಸಿಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.
ಬಿಎಂಟಿಸಿ (BMTC( ಚಾಲಕರಿಂದ ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಡಿಯೋ ಕಳುಹಿಸಿ ಬಿಎಂಟಿಸಿ ಹಾಗೂ ಸಾರಿಗೆ ಸಚಿವರನ್ನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ
Advertisement
Advertisement
ಹೆಬ್ಬಾಳ ಮತ್ತು ಕೆ.ಆರ್ ಪುರಂ ರಸ್ತೆಯಲ್ಲಿ ಬಿಎಂಟಿಸಿ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ. ಎರಡೂ ಕಡೆ ರ‍್ಯಾಶ್ ಡ್ರೈವಿಂಗ್ ಬಗ್ಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಬಿಎಂಟಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ
Advertisement
ದೂರಿನ ದೃಶ್ಯ -1
ಹೆಬ್ಬಾಳದ ಭದ್ರಪ್ಪ ವೃತ್ತದಿಂದ ಬರುವ ಬಿಎಂಟಿಸಿ ಬಸ್‌ಗಳು ಯೂ-ಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ಬಿಎಂಟಿಸಿ ಚಾಲಕರು ಮೊದಲು ಸರ್ ರಸ್ತೆಗೆ ಬರುತ್ತಾರೆ ಇದರಿಂದ ವಾಹನಗಳು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.
Advertisement
ದೃಶ್ಯ – 2
ಬಿಎಂಟಿಸಿ ಚಾಲಕ ಕೆ.ಆರ್ ಪುರಂ ಬಳಿ ಸಿಗ್ನಲ್ ಜಂಪ್ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಗಳೂ ಹೆಚ್ಚಾಗಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.