– ರಾಜಸ್ಥಾನ ಅಜ್ಮೀರ್ ಬಳಿ ದೃಷ್ಕೃತ್ಯ
ರಾಜಸ್ಥಾನ: ಕಾನ್ಪುರದ ಬಳಿಕ ರಾಜಸ್ಥಾನದ (Rajasthan) ಅಜ್ಮೇರ್‌ನಲ್ಲಿ (Ajmer) ಹಳಿ ಮೇಲೆ ವಸ್ತುಗಳನ್ನು ಇರಿಸಿ ರೈಲು ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಘಟನೆ ಬೆಳಕಿಗೆ ಬಂದಿದೆ.
Advertisement
ಅಜ್ಮೀರ್‌ನಿಂದ ಅಹಮದಾಬಾದ್‌ಗೆ (Ahmedabad) ಹೋಗುವ ಮಾರ್ಗ ಮಧ್ಯೆ ಹಳಿಯ ಎರಡು ಬದಿಗಳಲ್ಲಿ ಸಿಮೆಂಟ್ ಇಟ್ಟಿಗೆ ಇರಿಸಲಾಗಿತ್ತು. ಸಿಮೆಂಟ್ ಇಟ್ಟಿಗೆಗೆ ಡಿಕ್ಕಿ ಹೊಡೆದರೂ ಗೂಡ್ಸ್ ರೈಲಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಬಳಿಕ ರೈಲ್ವೆ ಚಾಲಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!
Advertisement
ಅಜ್ಮೀರ್‌ನ ಫುಲೇರಾದಿಂದ ಗುಜರಾತ್‌ನ (Gujarat) ಅಹಮದಾಬಾದ್‌ಗೆ ರೈಲು ಪ್ರಯಾಣಿಸುತ್ತಿದ್ದಾಗ ಮಂಗಳವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಇದನ್ನೂ ಓದಿ: ಬೇಲೂರು ಬಿಕ್ಕೋಡಿನಲ್ಲಿ ಜಲಕ್ರೀಡೆಯಾಡಿದ 20ಕ್ಕೂ ಹೆಚ್ಚು ಕಾಡಾನೆಗಳು
Advertisement
ತಪಾಸಣೆ ನಡೆಸಿದಾಗ, ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ 100 ಕಿಲೋಗ್ರಾಂಗಳಷ್ಟು ತೂಕದ ದೊಡ್ಡ ಕಾಂಕ್ರೀಟ್ ಇಟ್ಟಿಗೆ ಇಡಲಾಗಿತ್ತು. ಈ ಸಂಬಂಧ ಮಾಂಗಲ್ಯವಾಸ್ ಠಾಣೆಯಲ್ಲಿ ಆರ್‌ಪಿಎಫ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
Advertisement
ಭಾನುವಾರವಷ್ಟೇ ಕಾನ್ಪುರದಲ್ಲಿ (Kanpur) ಕಾಳಿಂದಿ ಎಕ್ಸ್ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್ ಇರಿಸಿದ್ದು, ರೈಲು ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು, ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತ ತಪ್ಪಿದೆ. ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆಗೆ (ಆರ್‌ಪಿಎಫ್) ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ರೈಲು ಅಪಘಾತವನ್ನು ತಪ್ಪಿಸಲಾಯಿತು. ಇದನ್ನೂ ಓದಿ: ಕಾರ್ಕಳ ರೇಪ್ ಕೇಸ್ ತನಿಖೆ ಚುರುಕು – ಮಾದಕ ವಸ್ತುಗಳ ಜಾಲದ ಬೆನ್ನು ಬಿದ್ದ ಖಾಕಿ