ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಕಥೆಯುಳ್ಳ ಸಿನಿಮಾ ಚಿತ್ರೀಕರಣದ ವೇಳೆ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಶೂಟಿಂಗ್ ನಡೆಸಿರುವ ಘಟನೆ ಗುಜರಾತ್ನ ವಡೋದರದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಲೋಕಸಭೆಗೂ ಮುನ್ನ ಮೋದಿ ಅವರ ಜೀವನಧಾರಿತ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಭಾಗವಾಗಿ ಚಿತ್ರೀಕರಣ ವೇಳೆ ನಿಜವಾದ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಚಿತ್ರೀಕರಣ ಮಾಡಿದ್ದಾರೆ. ಗ್ರಾಮದ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಗ್ರಾಮಸ್ಥರು ಅಚ್ಚರಿಯಿಂದ ಮನೆಯ ಮಹಡಿಗಳಿಂದ ಅತಂಕದಿಂದ ನೋಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡದೆ.
Advertisement
Advertisement
ಚಿತ್ರೀಕರಣಕ್ಕೂ ಮುನ್ನ ಬೇಕಾದ ಎಲ್ಲಾ ಪೂರ್ವ ಸಿದ್ಧತಾ ರಕ್ಷಣಾ ಕ್ರಮಗಳನ್ನು ತೆಗೆದುಕೊಂಡಿದ್ದು, ವೆಸ್ಟರ್ನ್ ರೈಲ್ವೆ ಮತ್ತು ವಡೋದರಾ ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪಡೆದು ಚಿತ್ರೀಕರಣ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. 2002 ಫೆ.27 ರಂದು ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಬೆಂಕಿ ಹಚ್ಚಿದ್ದ ಪರಿಣಾಮ 59 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ಘಟನೆ ಮೋದಿ ಅವರ ಸಿನಿಮಾದ ಪ್ರಮುಖ ಭಾಗವಾಗಿದೆ.
Advertisement
ಪಶ್ವಿಮ ರೈಲ್ವೆ ಪಿಆರ್ಒ ಖೇಮರಾಜ್ ಮೀನಾ ಅವರು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಚಿತ್ರವನ್ನು ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ಬೇರೆ ಯಾವುದೇ ರೈಲ್ವೆ ಪ್ರಯಾಣದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗಿತ್ತು. ಶೂಟಿಂಗ್ ನಡೆಸಲು ಬೇಕಾದ ಬೋಗಿಯನ್ನು ನಾವೇ ನೀಡಿದ್ದೇವೆ. ಈ ವೇಳೆ ಅಣಕು ಡ್ರಿಲ್ ಬೋಗಿ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Rajendra Gupta to portray PM Narendra Modi's father, while Yatin Karyekar to enact an important part in biopic #PMNarendraModi… Stars Vivek Anand Oberoi in title role… Directed by Omung Kumar… Produced by Suresh Oberoi and Sandip Ssingh… Official look: pic.twitter.com/xlFFoOuY5F
— taran adarsh (@taran_adarsh) February 26, 2019
ಬೋಗಿಗೆ ಬೆಂಕಿಗೆ ಬಿದ್ದಿರುವ ಹೊರಗಿನ ಭಾಗದ ದೃಶ್ಯಗಳನ್ನು ಮಾತ್ರ ಇಲ್ಲಿ ಚಿತ್ರೀಕರಿಸಲಾಗಿದೆ. ಬೋಗಿಯ ಒಳಗಿನ ದೃಶ್ಯಗಳನ್ನು ಸಿನಿಮಾ ಸೆಟ್ ರೂಪಿಸಿ ಮುಂಬೈನಲ್ಲಿ ಶೂಟ್ ಮಾಡಲಾಗುವುದು ಎಂದು ಶೂಟಿಂಗ್ ಜವಾಬ್ದಾರಿ ನಿರ್ವಹಿಸಿದ್ದ ಜಯರಾಜ್ ಗಾದ್ವಿ ತಿಳಿಸಿದ್ದಾರೆ.
ಚಿತ್ರೀಕರಂಣಕ್ಕೆ ರೈಲ್ವೇ ಇಲಾಖೆಯ ವಸ್ತುಗಳಿಗೆ ಹಾನಿಯಾಗಿದ್ದಾರೆ ಸಿನಿಮಾ ತಂಡದಿಂದ ಸಂಬಂಧಿಸಿದ ವಸ್ತುಗಳ ಮೌಲ್ಯವನ್ನು ದಂಡದ ರೂಪದಲ್ಲಿ ಪಡೆಯಲಾಗುವುದು. ಆದರೆ ಚಿತ್ರೀಕರಣಕ್ಕೆ ಅವಕಾಶ ಪಡೆದ ವೇಳೆ ‘ಗೋದ್ರಾ’ ಘಟನೆಯ ಕುರಿತು ವಿವರಣೆ ನೀಡಿಲ್ಲ. ಪ್ರಧಾನಿಗಳು ಟೀ ಮಾರಾಟ ಮಾಡುತ್ತಿದ್ದ ಬಗ್ಗೆ ಮಾತ್ರ ಚಿತ್ರೀಕರಣ ನಡೆಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ತಕ್ಷಣ ಇಲಾಖೆಗೆ ನಷ್ಟವಾಗಿದ್ದರೆ, ಹೆಚ್ಚಿನ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದರು.
ಶೂಟಿಂಗ್ಗಾಗಿ ರೈಲು ಬೋಗಿಗೆ ಬೆಂಕಿ ಹಚ್ಚೋದು ಅಗತ್ಯ ಇತ್ತಾ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಲೋಕಸಭಾ ಚುನಾವಣೆ ಹೊತ್ತಿಗೆ ದೇಶಾದ್ಯಂತ ತೆರೆ ಕಾಣಲಿದೆ ಮೋದಿ ಬಯೋಪಿಕ್ ಎಂದು ಚಿತ್ರತಂಡ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv