Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲಕ್ನೋ ಎನ್‍ಕೌಂಟರ್: ‘ಪ್ರಾಕ್ಟೀಸ್’ಗಾಗಿ ರೈಲು ಸ್ಫೋಟ, ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಲಕ್ನೋ ಎನ್‍ಕೌಂಟರ್: ‘ಪ್ರಾಕ್ಟೀಸ್’ಗಾಗಿ ರೈಲು ಸ್ಫೋಟ, ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರರು

Latest

ಲಕ್ನೋ ಎನ್‍ಕೌಂಟರ್: ‘ಪ್ರಾಕ್ಟೀಸ್’ಗಾಗಿ ರೈಲು ಸ್ಫೋಟ, ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರರು

Public TV
Last updated: March 8, 2017 12:54 pm
Public TV
Share
1 Min Read
thakurganj encounter weapons
SHARE

ಲಕ್ನೋ: ಉತ್ತರಪ್ರದೇಶದ ಲಕ್ನೋ ಬಳಿಯಿರುವ ಠಾಕುರ್‍ಘಂಜ್‍ನಲ್ಲಿ ಮಂಗಳವಾರದಂದು ಓರ್ವ ಶಂಕಿತ ಐಸಿಸ್ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದು, ಮಧ್ಯಪ್ರದೇಶ ಹಾಗೂ ಕಾನ್ಪುರದಿಂದ ಇತರೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇವರು ಐಸಿಸ್‍ನ ಭಾಗವಾದ ಹೊಸ ಉಗ್ರ ಸಂಘನೆಗೆ ಸೇರಿದ್ದವರು ಎನ್ನಲಾಗಿದ್ದು ಶೀಘ್ರದಲ್ಲೇ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಉತ್ತರಪ್ರದೇಶದ ಬಾರಾಬಂಕಿಯ ಸೂಫಿ ದರ್ಗಾ ಮೇಲೆ ದಾಳಿ ನಡೆಸುವ ಸಲುವಾಗಿ ಇವರು ಅಭ್ಯಾಸಕ್ಕಾಗಿ ಮಧ್ಯಪ್ರದೇಶದಲ್ಲಿ ಮಂಗಳವಾರದಂದು ರೈಲು ಸ್ಫೋಟ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಶಂಕಿತ ಐಸಿಸ್ ಉಗ್ರ ಸಂಘಟನೆಯಲ್ಲಿ 9 ಮಂದಿಯಿದ್ದು ಎಲ್ಲರೂ ಲಕ್ನೋ ಹಾಗೂ ಕಾನ್ಪುರದವರಾಗಿದ್ದಾರೆ ಎಂದು ರಾಷ್ಟೀಯ ತನಿಖಾ ದಳದ ಮೂಲಗಳು ತಿಳಿಸಿವೆ.

thakurganj encounter isis

ಮಂಗಳವಾರದಂದು ಠಾಕುರ್‍ಘಂಜ್‍ನ ಮನೆಯೊಂದರಲ್ಲಿದ್ದ ಶಂಕಿತ ಐಸಿಸ್ ಉಗ್ರ ಸೈಫುಲ್ಲಾನನ್ನು ಪೊಲೀಸರು ಹೊಡೆದುರುಳಿಸಿದ್ದರು. ಈ ಸಂಘಟನೆಯವರು ಕೆಲವು ತಿಂಗಳ ಹಿಂದಷ್ಟೆ ಮನೆಯನ್ನು ಬಾಡಿಗೆ ಪಡೆದಿದ್ದರು ಎಂದು ಹೇಳಲಾಗಿದೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ನಡೆಸಿದ ಕಮಾಂಡೋಗಳು ಸೈಫುಲ್ಲಾನನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸಿದ್ರು. ಆದ್ರೆ ಆತ ಶರಣಾಗಲು ನಿರಾಕರಿಸಿದ್ದರಿಂದ ಅಂತಿಮವಾಗಿ ಗೋಡೆಗೆ ರಂಧ್ರ ಕೊರೆದು ಕೊಠಡಿಗೆ ಪ್ರವೇಶಿಸಿ ಆತನನ್ನು ಹತ್ಯೆಗೈದರು. ಸೈಫುಲ್ಲಾ ಮೃತದೇಹದ ಬಳಿ 8 ಪಿಸ್ತೂಲ್, 650 ಮದ್ದುಗುಂಡುಗಳು, ಪಾಸ್ಪೋರ್ಟ್, ಸಿಮ್‍ಕಾರ್ಡ್‍ಗಳು, ಐಸಿಸ್ ಧ್ವಜ ಹಾಗು ರೈಲುಗಳ ವೇಳಾಪಟ್ಟಿ ಪತ್ತೆಯಾಗಿತ್ತು.

thakurganj encounter isis flag

ಈ ಸಂಘಟನೆಯ ನೇತೃತ್ವ ವಹಿಸಿರುವ ವ್ಯಕ್ತಿಯನ್ನು ಅತಿಫ್ ಮುಜಾಫರ್ ಎಂದು ಗುರುತಿಸಲಾಗಿದ್ದು, ಮಂಗಳವಾರದಂದು ಮಧ್ಯಪ್ರದೇಶದಲ್ಲಿ ಈತನೊಂದಿಗೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಭೋಪಾಲ್‍ನಿಂದ ಉಜ್ಜೈನ್‍ಗೆ ಹೊರಟಿದ್ದ ರೈಲಿನಲ್ಲಿ ಸ್ಫೋಟ ಸಂಭವಿಸಿ 9 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಇವರನ್ನು ಬಂಧಿಸಲಾಗಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಸೈಫುಲ್ಲಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗೂ ಇವರ ಮಾಹಿತಿಯನ್ನಾಧರಿಸಿ ಕಾನ್ಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ 20 ವರ್ಷ ಆಸುಪಾಸಿನ ವಯಸ್ಸಿನವರಾಗಿದ್ದಾರೆ.

TAGGED:ISISlucknow encounterPublic TVsuspected terroristsಉತ್ತರಪ್ರದೇಶಐಸಿಸ್ಪಬ್ಲಿಕ್ ಟಿವಿಲಕ್ನೋ ಎನ್‍ಕೌಂಟರ್ಶಂಕಿತ ಉಗ್ರರು
Share This Article
Facebook Whatsapp Whatsapp Telegram

Cinema news

Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema
Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post

You Might Also Like

03 8
Big Bulletin

ಬಿಗ್‌ ಬುಲೆಟಿನ್‌ 14 March 2026 ಭಾಗ-3

Public TV
By Public TV
52 seconds ago
Stray Dogs 1
Crime

ತೆಲಂಗಾಣದಲ್ಲಿ ನೂರಾರು ಬೀದಿ ನಾಯಿಗಳ ಹತ್ಯೆ – ಪ್ರಕರಣ ದಾಖಲು

Public TV
By Public TV
14 minutes ago
Donald Trump 1
Latest

ಶೀಘ್ರವೇ ಹಾರ್ಮುಜ್‌ ಜಲಸಂಧಿ ಓಪನ್‌: ಡೊನಾಲ್ಡ್‌ ಟ್ರಂಪ್‌

Public TV
By Public TV
54 minutes ago
Ramesha Bandisiddegowda
Karnataka

ಶ್ರೀಗಳ ಹೆಜ್ಜೆ ಎಲ್ಲೆಲ್ಲೋ ದಾರಿ ತಪ್ಪುತ್ತಿದೆ: ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

Public TV
By Public TV
1 hour ago
Rain Pralhad Joshi 1
Dharwad

ಧಾರವಾಡ | ಜೋಶಿ ಭಾಷಣದ ವೇಳೆಯೇ ಅಬ್ಬರಿಸಿದ ಮಳೆರಾಯ – ಕುಸ್ತಿ ಪಂದ್ಯ ರದ್ದು

Public TV
By Public TV
2 hours ago
Ayatollah Ali Khamenei
Latest

ಆಯತೊಲ್ಲಾ ಖಮೇನಿ ಭಾರತವನ್ನು ಪ್ರೀತಿಸುತ್ತಿದ್ದರು: ಇರಾನ್‌ ಸರ್ವೋಚ್ಚ ನಾಯಕನ ರಾಯಭಾರಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?