ವಿಭಿನ್ನ ಶೀರ್ಷಿಕೆಗಳ ಮೂಲಕ ಹೊರ ಬರುತ್ತಿರುವ ಚಿತ್ರಗಳ ಪೈಕಿ ’ಮಾರಾಯ’ ಸಿನಿಮಾವೊಂದು ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಸಿನಿಮಾವನ್ನು ನೋಡಿದ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ’ಯುಎ’ ಪ್ರಮಾಣಪತ್ರ ನೀಡಿದ್ದಾರೆ. ಉದಯ್‌ಪ್ರೇಮ್ ನಿರ್ದೇಶನ ಮಾಡುವುದರ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿರುವುದು ಹೊಸ ಅನುಭವವಂತೆ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ
ಇವರ ಶ್ರಮಕ್ಕೆ ಎನ್.ಜಿ.ಸುಜಾತ ನಂದನ್ ಸಾಥ್ ನೀಡಿದ್ದಾರೆ. ತಾರಗಣದಲ್ಲಿ ಹಿರಿಯ ನಟಿ ವಿನಯಪ್ರಸಾದ್, ಡಿಂಗ್ರಿನಾಗರಾಜ್, ಬಿಗ್‌ಬಾಸ್ ಖ್ಯಾತಿಯ ದಿವಾಕರ್, ಸಲಗ ಸೂರಿಯಣ್ಣ(ದಿನೇಶ್), ಮಹಾಭಾರತದ ಚಿಲ್ಲರ್‌ಮಂಜು, ಬಸು, ಜಿಕೆ, ಮೈ ಆಟೋ ಗ್ರಾಫ್‌ನ ಕುಮಾರ್‌ದೇವ್, ಮಣಿ, ಶ್ರೇಯ, ತೀನಾತಿಮಯ್ಯ, ಸ್ನೇಹ ಮುಂತಾದವರು ನಟಿಸಿದ್ದಾರೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ
ಚಿತ್ರದ ಟೈಟಲ್ ಟ್ರಾಕ್‌ನ್ನು ರಾಜೇಶ್‌ಕೃಷ್ಣನ್ ಹಾಡಿದ್ದು, ಎರಡು ಲಕ್ಷ ಜನರು ವೀಕ್ಷಣೆ ಮಾಡಿರುವುದು ತಂಡಕ್ಕೆ ಸಂತಸ ತಂದಿದೆ. ಅಲ್ಲದೆ ಯುಗಾದಿ ಹಬ್ಬದಂದು ಟ್ರೇಲರ್ ಬಿಡುಗಡೆಗೊಂಡಿದ್ದು ವೈರಲ್ ಆಗಿದೆ. ಸಂಗೀತ ವಿನುಮನಸು, ಛಾಯಾಗ್ರಹಣ ಉದಯಾನಂದ ಬರ್ಕೆ, ಸಂಕಲನ ಶಿವಕುಮಾರ್.ಎ, ಸಾಹಸ ಚಂದ್ರುಬಂಡೆ ಅವರದಾಗಿದೆ.