ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಹೊಸ ದರ ನಿಗದಿ ನಿಯಮವನ್ನು ಖಂಡಿಸಿ ಮತ್ತು ಕೇಬಲ್ ಆಪರೇಟರ್‌ಗಳ ಉಳಿವಿಗಾಗಿ ಜನವರಿ 24ರಂದು ರಾಜ್ಯಾದ್ಯಂತ ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ. ಜನವರಿ 24ರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕೇಬಲ್ ಬಂದ್ ಆಗಲಿದ್ದು, ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್‍ನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆ ಬಳಿಕ ರಾಜ್ಯ ಕೇಬಲ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಮಾತನಾಡಿ, ದಕ್ಷಿಣ ಭಾರತ ಆಪರೇಟರ್ಸ್ ಅಸೋಸಿಯೇಷನ್‍ನಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
Advertisement
Advertisement
ಟ್ರಾಯ್ ನ ಹೊಸ ನೀತಿಯಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಕಡಿಮೆ ಚಾನೆಲ್ ನೋಡಿ ಸಾವಿರದ ತನಕ ಹಣ ಕಟ್ಟುವಂತೆ ಗ್ರಾಹಕರ ಮೇಲೆ ಹೊರೆ ಹೊರಿಸಲಾಗಿದೆ. ಅಲ್ಲದೇ ಶೇ.18 ಜಿಎಸ್ ಟಿ ಸಹ ಗ್ರಾಹಕರ ಮೇಲೆ ಹೇರಲಾಗಿದೆ. ಅವರ ಮನೆಯಲ್ಲಿ ಕುಳಿತು ಟಿವಿ ನೋಡುವುದಕ್ಕೆ ತೆರಿಗೆ ಕಟ್ಟಬೇಕು ಎಂದು ತಿಳಿಸಿದರು.
Advertisement
300 ರೂ.ಗೆ 400 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ಕೇಬಲ್ ಆಪರೇಟರ್ ಗಳು ನೀಡುತ್ತಿದ್ದಾರೆ. ಟ್ರಾಯ್ ಹೊಸ ನೀತಿಯಿಂದ ಗ್ರಾಹಕರು ಕೇಬಲ್ ಗಾಗಿ 1 ಸಾವಿರ ರೂ.ಗಿಂತಲೂ ಹೆಚ್ಚಿನ ಹಣವನ್ನು ಕಟ್ಟಬೇಕು. ಟ್ರಾಯ್ ಗ್ರಾಹಕ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುವ ಸಲುವಾಗಿ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳ್ಳಿಸುತ್ತೇವೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv