ಬೆಂಗಳೂರು: ಟ್ರಾಫಿಕ್ ಪೊಲೀಸರು ಇಲ್ಲ ಸಿಗ್ನೆಲ್ ಜಂಪ್ ಮಾಡಿದರೆ ನಡೆಯುತ್ತೆ ಎಂದು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ಮುನ್ನ ಎಚ್ಚರವಾಗಿರಿ. ಏಕೆಂದರೆ ಗೊಂಬೆಗಳ ಕಣ್ಣಲ್ಲಿ ನಿಮ್ಮ ಸಂಚಾರ ಉಲ್ಲಂಘನೆ ಸೆರೆಯಾಗುತ್ತೆ.
ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಸಿಗ್ನಲ್‍ಗಳಲ್ಲಿ ಸಂಚಾರಿ ಪೊಲೀಸರು ಮ್ಯಾನ್‍ಕ್ವೀನ್‍ಗಳನ್ನು ಹಾಕಿದ್ದಾರೆ. ಮ್ಯಾನ್‍ಕ್ವೀನ್ ಎಂದರೆ ಟ್ರಾಫಿಕ್ ಪೊಲೀಸರ ಬಟ್ಟೆ ಹಾಕಿ ನಿಲ್ಲಿಸಿರುವ ಗೊಂಬೆಗಳು. ಇದೀಗ ಈ ಗೊಂಬೆಗಳ ಕಣ್ಣಲ್ಲಿ ಹೈ ರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಕಂಟ್ರೋಲ್‍ಗೆ ಪೊಲೀಸರಿಂದ ಹೊಸ ಐಡಿಯಾ
Advertisement
Advertisement
ಸಂಚಾರಿ ನಿಮಯಗಳನ್ನು ಉಲ್ಲಂಘನೆ ಮಾಡಿದರೆ ಈ ಮ್ಯಾನ್‍ಕ್ವೀನ್‍ಗಳು ಫೇಸ್ ಐಡೆಂಟಿಟಿ ಮಾಡುತ್ತೆ. ಒಮ್ಮೆ ಮ್ಯಾನ್‍ಕ್ವೀನ್‍ಗಳ ಕಣ್ಣಲ್ಲಿ ಸೆರೆಯಾದರೆ, ಮುಂದಿನ ಸಿಗ್ನಲ್‍ನಲ್ಲಿ ಪೊಲೀಸರು ಅವರನ್ನು ಹಿಡಿಯಲಿದ್ದಾರೆ. ಈಗಾಗಲೇ ನಾಲ್ವರು ಇಂಜಿನಿಯರ್ ಗಳ ಜೊತೆ ಕಮೀಷನರ್ ಮಾತುಕತೆ ನಡೆಸಿದ್ದಾರೆ. ಹೈ ರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲು ತಯಾರಿ ನಡೆಸಿದ್ದಾರೆ.
Advertisement
ಅಲ್ಲದೆ ಮುಂದಿನ ದಿನಗಳಲ್ಲಿ ರೋಬೊಟಿಕ್ ಮಾದರಿಯ ತಂತ್ರ್ಯಜ್ಞಾನವನ್ನು ಮ್ಯಾನ್‍ಕ್ವೀನ್‍ಗಳಲ್ಲಿ ಅಳವಡಿಸುವ ಬಗ್ಗೆಯೂ ಸಹ ತಯಾರಿ ನಡೆದಿದೆ.