ದಾವಣಗೆರೆ: ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುವ ಸವಾರರನ್ನು ಪೊಲೀಸರು ಹಿಡಿದು ಜಾಗೃತಿ ಮೂಡಿಸಿ ದಂಡ ಹಾಕುವುದು ಸರ್ವೆ ಸಾಮಾನ್ಯ. ಆದರೆ ಹರಪ್ಪನಹಳ್ಳಿ ತಾಲೂಕಿನಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಲು ನ್ಯಾಯಾಧೀಶೆಯೊಬ್ಬರು ರಸ್ತೆಗಿಳಿದು ಹೆಲ್ಮೆಟ್ ರಹಿತ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ.
ಕಳೆದ 15 ದಿನಗಳಿಂದ ಸಂಚಾರ ಪೊಲೀಸರು ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕೇವಲ ಕಾರ್ಯಕ್ರಮ ಮಾಡಿ ಭಾಷಣ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದ ಹರಪನಹಳ್ಳಿ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ತಾವೇ ರಸ್ತೆಗೆ ಇಳಿದು ಬೈಕ್ ಸವಾರರಿಗೆ ಸ್ವತಃ ದಂಡ ವಿಧಿಸಿದರು.
ಪೊಲೀಸರನ್ನು ಸ್ಥಳಕ್ಕೆ ಕರೆಸಿ ವಾಹನ ಸವಾರರಿಗೆ ದಂಡ ಹಾಕಿದ ಅವರು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಬೈಕ್ ಸವಾರರಿಗೆ ಮನವಿ ಮಾಡಿದರು. ನ್ಯಾಯಾಧೀಶೆಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews