ಬೆಂಗಳೂರು: ಜೆರೋಧಾ ಪ್ರಾಯೋಜಕತ್ವ, ಮಂತ್ರ 4 ಚೇಂಜ್ ಹಾಗೂ ಸೂರ್ಯ ಫೌಂಡೇಶನ್ ಸಂಸ್ಥೆಗಳು ಬಿಬಿಎಂಪಿ ಸಹಯೋಗದೊಂದಿಗೆ ದಕ್ಷಿಣವಲಯ ವ್ಯಾಪ್ತಿಗೆ ಒಂದು ಸಂಚಾರಿ ಪರೀಕ್ಷಾ ಘಟಕ(ಮೊಬೈಲ್ ಟೆಸ್ಟಿಂಗ್ ಯುನಿಟ್-ಎಂಟಿಯು)ವನ್ನು ಪಾಲಿಕೆಗೆ ಹಸ್ತಾಂತರಿಸಿದೆ. ಮುಖ್ಯ ಆಯುಕ್ತರು ಗೌರವ್ ಗುಪ್ತ ಅವರು ಇಂದು ಎಂಟಿಯುಗೆ ಚಾಲನೆ ನೀಡಿದರು.
Advertisement
ಈ ಸಂಚಾರಿ ಪರೀಕ್ಷಾ ಘಟಕವು ಪಾಲಿಕೆಯ ದಕ್ಷಿಣ ವಲಯದ ವಾರ್ ರೂಂ ಮತ್ತು ಸಂಚಾರಿ ಟ್ರಯಾಜ್ ಘಟಕದೊಂದಿಗೆ ಸಂಪರ್ಕ ಹೊಂದಿರುತ್ತದೆ. ವಾರ್ ರೂಂನಲ್ಲಿ ಸ್ವೀಕರಿಸಲ್ಪಡುವ ಕರೆಗಳಿಗೆ ಅನುಸಾರವಾಗಿ ಸಂಚಾರಿ ಪರೀಕ್ಷಾ ಘಟಕವು ವಲಯದ 44 ವಾರ್ಡ್‍ಗಳಲ್ಲಿಯೂ 24/7 ಕಾರ್ಯನಿರ್ವಹಿಸಲಿದ್ದು, ದಕ್ಷಿಣ ವಲಯದಲ್ಲಿ ಯಶಸ್ವಿಯಾದರೆ ಉಳಿದ 7 ವಲಯಗಳಿಗೂ ಒಂದೊಂದು ಸಂಚಾರಿ ಪರೀಕ್ಷಾ ಘಟಕ ನಿಯೋಜನೆ ಮಾಡಲಾಗುವುದು. ಇದನ್ನೂ ಓದಿ: ಮಹಿಳಾ ಉದ್ದೇಶಿತ ಆಯವ್ಯಯದಡಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ವೃತ್ತಿಪರ ತರಬೇತಿಗಾಗಿ ಅರ್ಜಿ ಆಹ್ವಾನ
Advertisement
Advertisement
ಈ ಸಂಚಾರಿ ಪರೀಕ್ಷಾ ಘಟಕದಲ್ಲಿ ಓರ್ವ ಚಾಲಕ ಮತ್ತು ಓರ್ವ ಪ್ಯಾರಾಮೆಡಿಕ್ ಇರಲಿದ್ದು, ಪ್ಯಾರಾಮೆಡಿಕ್ ಸಿಬ್ಬಂದಿಯು ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡುತ್ತಾರೆ. ಪಾಸಿಟಿವ್ ದೃಢಪಟ್ಟಲ್ಲಿ ವ್ಯಕ್ತಿಗೆ ಪಾಲಿಕೆಯಿಂದ ಕರೆ ಬರುತ್ತದೆ. ಪ್ರಕರಣದ ಗಂಭೀರತೆಯ ಆಧಾರದ ಮೇಲೆ, ಟ್ರಯಾಜ್ ಬಳಿಕ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆ.
Advertisement
ದಕ್ಷಿಣ ವಲಯದಲ್ಲಿನ 6 ಕೋವಿಡ್ ಆರೈಕೆ ಕೇಂದ್ರಗಳಿಗೆ N95 ಮಾಸ್ಕ್ ಗಳು, ಪಿಪಿಇ ಕಿಟ್‍ಗಳು, ಪರೀಕ್ಷಾ ಕಿಟ್‍ಗಳು, ಥರ್ಮಲ್ ಸ್ಕ್ಯಾನರ್ ಗಳು ಮತ್ತು ಸ್ಯಾನಿಟೈಸರ್ ನೀಡಲಾಗಿದ್ದು, ಅದರ ವಿವರಗಳು ಕೆಳಗಿನಂತಿವೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು
1. N95 ಮಾಸ್ಕ್ ಗಳು- 1,000
2. ಪಿಪಿಇ ಕಿಟ್ ಗಳು- 300
3. ಪರೀಕ್ಷಾ ಕಿಟ್ ಗಳು- 500
4. ಥರ್ಮಲ್ ಸ್ಕ್ಯಾನರ್ ಗಳು – 15
5. ಸ್ಯಾನಿಟೈಸರ್- 220 ಲೀಟರ್
ಈ ವೇಳೆ ದಕ್ಷಿಣ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ, ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ.ತ್ರಿಲೋಕ್ ಚಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.